ETV Bharat / state

ಮೈಸೂರು ಪಾಲಿಕೆಯಿಂದ ಮಾಸ್ಟರ್​ ಪ್ಲಾನ್​: ತೆರಿಗೆ ಕಟ್ಟದವರಿಗೆ 'ಬ್ಯಾನರ್ ಚಳವಳಿ' ಬಿಸಿ - Mysore mahanagara palike latest update

ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ನಿಯಮಗಳ ಅನುಸಾರ ಆಸ್ತಿ ತೆರಿಗೆಯನ್ನು ಜಪ್ತಿ ಮಾಡುವ ಮೂಲಕ ವಸೂಲಿ ಮಾಡಲು ಕ್ರಮ ವಹಿಸಲಾಗುವುದೆಂದು ಈ ಮೂಲಕ ನೋಟಿಸ್ ನೀಡಿದೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದ್ದು, ಆಸ್ತಿಯ ಹೆಸರು ಮತ್ತು ಎಷ್ಟು ವರ್ಷಗಳಿಂದ ತೆರಿಗೆ ಬಾಕಿ ಉಳಿಸಲಾಗಿದೆ ಎಂಬ ಮಾಹಿತಿಯೂ ಬ್ಯಾನರ್‌ನಲ್ಲಿದೆ.

Banner Movement from Mysore mahanagara palike
ತೆರಿಗೆ ಕಟ್ಟದವರಿಗೆ 'ಬ್ಯಾನರ್ ಚಳವಳಿ' ಬಿಸಿ
author img

By

Published : Nov 11, 2021, 4:04 PM IST

ಮೈಸೂರು: 10-15 ವರ್ಷಗಳಿಂದ ತೆರಿಗೆ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳು, ಮನೆಗಳು ಸೇರಿದಂತೆ ಎಲ್ಲಾ ಆಸ್ತಿಗಳ ತೆರಿಗೆ ಪಾವತಿಸುವಂತೆ ಪಾಲಿಕೆಯಿಂದ ನಿರಂತರ ನೋಟಿಸ್ ನೀಡಿದರೂ ಕೂಡ ತೆರಿಗೆ ಪಾವತಿ ಮಾಡದವರಿಗೆ ಬಿಸಿಮುಟ್ಟಿಸುವ ಸಲುವಾಗಿ ಮೈಸೂರು ಮಹಾನಗರ ಪಾಲಿಕೆ‌ (Mysuru Mahanagara Palike ) ವತಿಯಿಂದ ಬ್ಯಾನರ್ ಚಳವಳಿ (Banner Movement) ಆರಂಭಿಸಲಾಗಿದೆ.

ಪಾಲಿಕೆಯ 9 ವಲಯಗಳಲ್ಲಿಯೂ ಆಯಾ ವಲಯ ಕಚೇರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದ್ದು, 10-15 ವರ್ಷಗಳಿಂದ ತೆರಿಗೆ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡ, ಮನೆ ಸೇರಿದಂತೆ ಎಲ್ಲಾ ಆಸ್ತಿಗಳ ಮುಂದೆ ಅಧಿಕಾರಿಗಳು ಬ್ಯಾನರ್ ಅಳವಡಿಸುತ್ತಿದ್ದಾರೆ.

ವಲಯ 3 ಮತ್ತು 4 ರಲ್ಲಿ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಲ್ಯಾಣ ಮಂಟಪಗಳು, ಖಾಸಗಿ ಆಸ್ಪತ್ರೆ, ವಾಣಿಜ್ಯ ಕಟ್ಟಡಗಳು, ಮನೆಗಳ ಮುಂದೆ ಬ್ಯಾನರ್ ಅಳವಡಿಸಲು ಆರಂಭಿಸಲಾಗಿದೆ. ಕೆಲವರು ಬ್ಯಾನರ್ ಕಟ್ಟದಂತೆ ಮನವಿ ಮಾಡಿದ್ದು, ತೆರಿಗೆ ಪಾವತಿಸಲು ಸಮಯಾವಕಾಶ ಕೋರಿದ್ದಾರೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಖಾಸಗಿ ಆಸ್ಪತ್ರೆಯೊಂದರ ಮುಂದೆಯೂ ಬ್ಯಾನರ್ ಕಟ್ಟಿದ್ದು, ಪೆಟ್ರೋಲ್ ಪಂಪ್ ವೊಂದನ್ನು ಮುಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ದೊಡ್ಡ ಮೊತ್ತದ ತೆರಿಗೆ ಬಾಕಿಯುಳಿಸಿಕೊಂಡವರಿಂದ ಮೊದಲು ವಸೂಲಿಗೆ ಕ್ರಮವಹಿಸಲಾಗಿದೆ.

ಬ್ಯಾನರ್​​ನಲ್ಲೇನಿದೆ?:

ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ನಿಯಮಗಳ ಅನುಸಾರ (Karnataka Municipal Corporations Act)ಆಸ್ತಿ ತೆರಿಗೆಯನ್ನು ಜಪ್ತಿ ಮಾಡುವ ಮೂಲಕ ವಸೂಲಿ ಮಾಡಲು ಕ್ರಮವಹಿಸಲಾಗುವುದೆಂದು ಈ ಮೂಲಕ ನೋಟಿಸ್ ನೀಡಿದೆ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದ್ದು, ಆಸ್ತಿಯ ಹೆಸರು ಮತ್ತು ಎಷ್ಟು ವರ್ಷಗಳಿಂದ ತೆರಿಗೆ ಬಾಕಿಯುಳಿಸಲಾಗಿದೆ ಎಂಬ ಮಾಹಿತಿಯೂ ಬ್ಯಾನರ್ ನಲ್ಲಿದೆ.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಪ್ರಕರಣ: ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತರಾ ಪ್ರಧಾನಿ ಮೋದಿ..?

ಹಲವರಿಂದ ತೆರಿಗೆ ಪಾವತಿ:

ಬ್ಯಾನರ್ ಚಳವಳಿ ಆರಂಭವಾದ ಬಳಿಕ ಹಲವು ಆಸ್ತಿಗಳ ಮಾಲೀಕರು ತೆರಿಗೆ ಪಾವತಿಗೆ ಮುಂದಾಗಿದ್ದು, ಕೆಲವೆಡೆ ಅಧಿಕಾರಿಗಳು ಬ್ಯಾನರ್ ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಮಾಲೀಕರು ತೆರಿಗೆ ಪಾವತಿಸಿರುವುದು ತಿಳಿದು ಬಂದಿದೆ.

ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ (Commissioner Lakshmikant Reddy) ಈ ಬಗ್ಗೆ ಮಾತನಾಡಿ, ಆಸ್ತಿ ತೆರಿಗೆಯನ್ನು ಕಾಲಕಾಲಕ್ಕೆ ಪಾವತಿಸಿ ಮಾಲೀಕರು ಹಾಗೂ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕು. ಬಹಳ ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.