ಮೈಸೂರು: ನಕಲಿ ವಕೀಲನೋರ್ವನಿಗೆ ರಾಜ್ಯ ಉಚ್ಛ ನ್ಯಾಯಾಲಯ ಜಾಮೀನು ಮಂಜೂರು ನೀಡಿದೆ.
ಎಂ ವಿಲಿಯಮ್ಸ್ ಎಂಬ ಆರೋಪಿಗೆ ಬೇಲ್ ಸಿಕ್ಕಿದೆ. ಈತ 33 ವರ್ಷಗಳಿಂದ ವಕೀಲನೆಂದು ಹೇಳಿಕೊಂಡು ಹುಣಸೂರಿನ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳಲ್ಲಿ ತನ್ನ ಕಕ್ಷಿದಾರರ ಪರ ವಾದ ಮಂಡಿಸಿದ್ದ. ಇದಲ್ಲದೆ, ಹುಣಸೂರು ವಕೀಲರ ಸಂಘದಲ್ಲಿ ಅಧ್ಯಕ್ಷ ಕೂಡ ಆಗಿದ್ದ.
ಈತನ ವಿರುದ್ಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ 2019 ಮೇ 29 ರಂದು ಪ್ರಕರಣ ದಾಖಲಾದ ಮೇಲೆ ಬಂಧಿಸಲಾಗಿತ್ತು. ಈಗ ಹೈಕೋರ್ಟ್ ಈತನಿಗೆ ಜಾಮೀನು ನೀಡಿ ಆದೇಶಿಸಿದೆ. ಈಗ ಆರೋಪಿ ಬೇಲ್ ಮೇಲೆ ಹೊರ ಬಂದಿದ್ದಾನೆ.