ETV Bharat / state

ಚಿನ್ನಾಭರಣ ದೋಚಿದ ಪೂಜಾರಿ ಅಂದರ್: 21 ಲಕ್ಷ ರೂ. ಮೌಲ್ಯದ 456 ಗ್ರಾಂ ಚಿನ್ನಾಭರಣ ವಶ

ಪೂಜೆ ನೆಪದಲ್ಲಿ 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಪೂಜಾರಿ ಮನು ಎಂಬಾತನನ್ನು ಬಂಧಿಸಿ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

mysore
ಪೂಜಾರಿ ಬಂಧನ
author img

By

Published : Nov 2, 2020, 5:38 PM IST

ಮೈಸೂರು: ಪೂಜೆ ನೆಪದಲ್ಲಿ 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಪೂಜಾರಿಯನ್ನು ಬಂಧಿಸಿ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಪೂಜಾರಿ ಮನು(28) ಬಂಧಿತ ಆರೋಪಿ. ಈತ ತನ್ನ ಮನೆಯಲ್ಲಿ ಚಿನ್ನಾಭರಣ ಇಟ್ಟು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಅಕ್ಟೋಬರ್ 25ರಂದು ಸಾತಿ ಗ್ರಾಮದ ನಿವಾಸಿಗಳಾದ ಬಸಪ್ಪ, ಶಿವಲಿಂಗಪ್ಪ, ಪುಟ್ಟಪ್ಪ, ಭಾರತಿ, ಶೀಲಾ, ದೀಪಾ ಹಾಗೂ ಹುಣಸೂರಿನ ಸಂತೋಷ್ ಎಂಬುವರಿಂದ 456 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಪೂಜೆಗೆ ಇಟ್ಟಿದ್ದ. ಪೂಜೆ ಮಾಡಿದ ಒಡವೆಗಳನ್ನು ಆಯುಧ ಪೂಜೆಯ ದಿವಸದವರೆಗೆ ತೆಗೆಯಬೇಡಿ ಎಂದು ಹೇಳಿದ ಪೂಜಾರಿ ಮನು, ತನ್ನ ಮನೆಯ ಬೀರುವಿನಲ್ಲಿ ಇರಿಸಿದ್ದನಂತೆ.

mysore
456 ಗ್ರಾಂ ಚಿನ್ನಾಭರಣವನ್ನು ವಶ

ಅಂದು ರಾತ್ರಿ 8.30ರ ಸಮಯದಲ್ಲಿ ಬಟ್ಟೆ ಬದಲಾಯಿಸುವ ನೆಪದಲ್ಲಿ ಕೊಠಡಿಗೆ ಹೋಗಿ ಬೀರುವಿನಲ್ಲಿಟ್ಟಿದ್ದ 456 ಗ್ರಾಂ ಚಿನ್ನಾಭರಣವನ್ನು ಎತ್ತಿಕೊಂಡು ಪರಾರಿಯಾಗಿದ್ದ. ಈತನ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಪ್ರಕರಣ ಬೆನ್ನತ್ತಿದ್ದ ಪೊಲೀಸರು ಕೆ.ಆರ್.ನಗರ ಬಸ್ ನಿಲ್ದಾಣದಲ್ಲಿ ಪೂಜಾರಿ ಮನುವನ್ನು ಬಂಧಿಸಿ, 21 ಲಕ್ಷ ರೂ. ಮೌಲ್ಯದ 456 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.