ಮೈಸೂರು: ನಗರದ ಚಿನ್ನದ ಅಂಗಡಿಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಇಬ್ಬರು ಹಾಗೂ ಓರ್ವ ಸ್ಥಳೀಯನನ್ನು ಮಹಾರಾಷ್ಟ್ರದ ಪುಣೆ ಏರ್ಪೋರ್ಟ್ನಲ್ಲಿ ಬಂಧಿಸಲಾಗಿದೆ.
![ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು](https://etvbharatimages.akamaized.net/etvbharat/prod-images/12888968_491_12888968_1630037211118.png)
![ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು](https://etvbharatimages.akamaized.net/etvbharat/prod-images/12888968_196_12888968_1630037231008.png)
![ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು](https://etvbharatimages.akamaized.net/etvbharat/prod-images/12888968_648_12888968_1630037250762.png)
ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಾಲ್ಕು ದಿನಗಳ ಹಿಂದೆ ಇವರ ಅಮಾನವೀಯ ಕೃತ್ಯಕ್ಕೆ ಅಮಾಯಕ ಚಂದ್ರು ಎಂಬ ಯುವಕ ಬಲಿಯಾಗಿದ್ದ. ಇದರ ಬೆನ್ನಲ್ಲೇ ಪೊಲೀಸರು ತಕ್ಷಣವೇ ಆರೋಪಿಗಳನ್ನು ಬಂಧಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ವಿದ್ಯಾರಣ್ಯಪುರಂ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.