ಮೈಸೂರು: ಹುಣಸೂರು ತಾಲ್ಲೂಕಿನ ನಲೂರುಪಾಲ ಗ್ರಾಮದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಜ್ಜಿಯೊಬ್ಬರು ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. ಯಾವ ನೃತ್ಯಪಟುವಿಗೂ ಕಡಿಮೆ ಇಲ್ಲದಂತೆ ಅಜ್ಜಿ ಸ್ಟೆಪ್ ಹಾಕಿದ್ದು ಕಂಡುಬಂತು.
ಈ ಅಜ್ಜಿಯೊಂದಿಗೆ ಇಬ್ಬರು ಮಕ್ಕಳು ಡ್ಯಾನ್ಸ್ ಮಾಡಿ ಗಮನ ಸೆಳೆದರು. ಕೊರೊನಾ ಸೋಂಕು ತಗುಲಿ ಅದೆಷ್ಟೋ ಮಂದಿ ಭಯ, ಆತಂಕದಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆತ್ಮಸ್ಥೈರ್ಯವಿದ್ದರೆ ಕೊರೊನಾ ರೋಗವನ್ನು ಓಡಿಸಬಹುದು ಎಂಬುವುದಕ್ಕೆ ಅಜ್ಜಿಯ ಜೀವನೋತ್ಸಾಹ ಒಂದು ಸಣ್ಣ ನಿದರ್ಶನ.
ಇದನ್ನೂ ಓದಿ: ಸಿಸಿಟಿವಿ ಒಡೆದು ಎಟಿಎಂ ದರೋಡೆಗೆ ಬಂದ ಕಳ್ಳರು ಇನ್ನೊಂದು ಸಿಸಿಟಿವಿಯಲ್ಲಿ ಸಿಕ್ಕು ಪೇಚಿಗೀಡಾದ್ರು!