ETV Bharat / state

ರಾಜ್ಯದ 9 ಮೃಗಾಲಯಗಳಿಂದ ಪ್ರಾಣಿ-ಪಕ್ಷಿಗಳ ದತ್ತು.. ₹3.47 ಕೋಟಿ ಸಂಗ್ರಹ - Adoption of animal birds

ಕೊರೊನಾ ವೈರಸ್ ಹಾವಳಿಯಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿರುವ ರಾಜ್ಯದ 9 ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಪ್ರವಾಸಿಗರಿಲ್ಲದ ಕಾರಣ ಆದಾಯವೂ ಇಲ್ಲದೆ ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು ಪೋಷಣೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಆಡಳಿತ ಹಾಗೂ ಸಿಬ್ಬಂದಿಗೆ ಸ್ವಲ್ಪ ನಿರಾಳವೆನೆಸಿದೆ. ಹೌದು, ಮೃಗಾಲಯಗಳಿಗೆ ದಾನಿಗಳು ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Adoption of animal birds from 9 zoos in the state: Rs 3.47 crore collection
ರಾಜ್ಯದ 9 ಮೃಗಾಲಯಗಳಿಂದ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ: 3.47 ಕೋಟಿ ರೂಪಾಯಿ ಸಂಗ್ರಹ
author img

By

Published : Jul 1, 2020, 3:40 PM IST

ಮೈಸೂರು: ಕೊರೊನಾ ಆರ್ಭಟದ ನಡುವೆಯೂ ರಾಜ್ಯದಲ್ಲಿರುವ 9 ಮೃಗಾಲಯಗಳ ಪ್ರಾಣಿಗಳ ಮೇಲೆ ಪ್ರೀತಿ ತೋರಿರುವ ಪ್ರಾಣಿ ಪ್ರಿಯರು, ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಇದರಿಂದಾಗಿ ಹೆಚ್ಚು ಆದಾಯ ಸಂಗ್ರಹವಾಗಿರುವುದು ಗಮನಾರ್ಹ.

ರಾಜ್ಯದ 9 ಮೃಗಾಲಯಗಳಿಂದ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ.. 3.47 ಕೋಟಿ ರೂ. ಸಂಗ್ರಹ

ಕೊರೊನಾ ವೈರಸ್ ಹಾವಳಿಯಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿರುವ ರಾಜ್ಯದ 9 ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಪ್ರವಾಸಿಗರಿಲ್ಲದ ಕಾರಣ ಆದಾಯವೂ ಇಲ್ಲದೆ ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು ಪೋಷಣೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಆಡಳಿತ ಹಾಗೂ ಸಿಬ್ಬಂದಿಗೆ ಸ್ವಲ್ಪ ನಿರಾಳವೆನಿಸಿದೆ. ಮೃಗಾಲಯಗಳಿಗೆ ದಾನಿಗಳು ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರದಿಂದ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯವು 3,13,73,200 ಕೋಟಿ ರೂ.ಗಳಿಸಿ ಮುಂಚೂಣಿಯಲ್ಲಿದ್ರೆ, ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮ‌ 49 ಸಾವಿರ ಗಳಿಸಿ ಕೊನೆಯ ಸ್ಥಾನದಲ್ಲಿದೆ. ಕೋವಿಡ್-19 ಸಂದರ್ಭದಲ್ಲಿ ರಾಜ್ಯದ ಎಲ್ಲ ಮೃಗಾಲಯಗಳಿಂದ ಒಟ್ಟು 3,47,87,772 (3.47 ಕೋಟಿ) ರೂಪಾಯಿ ಹಣ ಸಂಗ್ರಹವಾಗಿದೆ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 2019-20ರಲ್ಲಿ 50.34ಲಕ್ಷರೂ. 2020-21ರಲ್ಲಿ 3,13,73,200 ಕೋಟಿ ರೂ, ಬೆಂಗಳೂರಿನಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ 2019-20ರಲ್ಲಿ 7.02 ಲಕ್ಷ ರೂ, 2020-21ರಲ್ಲಿ 21,42,750 ಲಕ್ಷ ರೂ., ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪದಲ್ಲಿರುವ ಹುಲಿ ಹಾಗೂ ಸಿಂಹ ಸಫಾರಿ ಕೇಂದ್ರಕ್ಕೆ‌ 2019-20ರಲ್ಲಿ 53,950 ರೂ., 2020-21ರಲ್ಲಿ ಪ್ರಾಣಿಗಳ ದತ್ತು ಸ್ವೀಕಾರ ಮಾಡಿಲ್ಲ.

ಹಂಪಿಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ 2019-20ರಲ್ಲಿ 1 ಲಕ್ಷ ರೂ., 2020-21ರಲ್ಲಿ 10 ಲಕ್ಷ ರೂ‌., ಕಲಬುರ್ಗಿಯ ಚಿಲ್ಡ್ರನ್ ಪಾಕ್೯ & ಮಿನಿ ಮೃಗಾಲಯಕ್ಕೆ 2019-20, 2020-21 ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರವಾಗಿಲ್ಲ. ಗದಗ ಜಿಲ್ಲೆಯ ಬಿಂಕದಕಟ್ಟೆಯ ಮಿನಿ ಮೃಗಾಲಯಕ್ಕೆ 2019-20ರಲ್ಲಿ ದತ್ತು ಸ್ವೀಕಾರವಿಲ್ಲ.

2020-21ರಲ್ಲಿ‌ 95,500 ರೂ., ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮಕ್ಕೆ 2019-20ರಲ್ಲಿ ದತ್ತು ಸ್ವೀಕಾರವಿಲ್ಲ. 2020-21ರಲ್ಲಿ ₹49ಸಾವಿರ, ಚಿತ್ರದುರ್ಗ ಜಿಲ್ಲೆಯ ಕಾಡುಮಲ್ಲೇಶ್ವರ ಮೃಗಾಲಯಕ್ಕೆ‌ 2019-20ರಲ್ಲಿ ದತ್ತು ಸ್ವೀಕಾರವಾಗಿಲ್ಲ, 2020-21ರಲ್ಲಿ 1,28,322 ರೂ‌‌ಪಾಯಿ ಹಣ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.