ಮೈಸೂರು : ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ತಮ್ಮ ಪುತ್ರನ ಹೆಸರಿನಲ್ಲಿ ಇಂಡಿಯನ್ ಚಿರತೆಯೊಂದನ್ನು ದತ್ತು ಪಡೆದಿದ್ದಾರೆ.
2021ರ ಜುಲೈ 19ರಿಂದ 2022ರವರೆಗೆ ಜುಲೈ 18ರವರೆಗೆ ಪುತ್ರ ರಣ್ವಿತ್ ಶೆಟ್ಟಿ ಹೆಸರಿನಲ್ಲಿ ಇಂಡಿಯನ್ ಚಿರತೆಯನ್ನು ರಿಷಬ್ ಶೆಟ್ಟಿಯವರು ದತ್ತು ಪಡೆದಿದ್ದಾರೆ.
ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಮೃಗಾಯಲಗಳ ನೆರವಿಗೆ ಮುಂದಾಗಿರುವ ಸ್ಯಾಂಡಲ್ವುಡ್ ನಟ-ನಟಿಯರು, ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಕಾಳಜಿ ಮೆರೆದಿದ್ದಾರೆ.
ಓದಿ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜತೆ ಜಾರಕಿಹೊಳಿ ಸಹೋದರರಿಂದ ಪ್ರತ್ಯೇಕ ಸಭೆ