ETV Bharat / state

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರ ನೋವು ತಂದಿದೆ: ನಟ ಅನಿರುದ್ಧ್​​ - Actress Ragini

ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನು ಬಿಟ್ಟು ಹೋಗಬೇಕು. ಹಿರಿಯರು ಹಾಕಿದ ಬುನಾದಿಯನ್ನು ನಾವು ಕೆಡಿಸಬಾರದು. ಹಾಗಾಗಿ ಆ ಹಾದಿಯಲ್ಲಿ ನಾವು ಸಾಗಬೇಕಿದೆ ಎಂದಿದ್ದಾರೆ. ನಾವು ಹಿರಿಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ಬೆಳೆಯಬೇಕು. ನಮ್ಮನ್ನ ನೋಡಿ ಸಮಾಜ ಮತ್ತು ಮಕ್ಕಳು ಕಲಿಯುತ್ತಾರೆ ಎಂದಿದ್ದಾರೆ.

Actor Anirud Talks on Sandalwood Drug link allegation
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರ ನೋವು ತಂದಿದೆ: ನಟ ಅನಿರುದ್ಧ್​​
author img

By

Published : Sep 15, 2020, 1:27 PM IST

ಮೈಸೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರ ಕೇಳಿ ಬರುತ್ತಿರುವುದು ಬೇಸರ ತಂದಿದೆ ಎಂದು ನಟ ಅನಿರುದ್ಧ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಸ್ಯಾಂಡಲ್‌ವುಡ್ ನಟ-ನಟಿಯರ ಮೇಲೆ‌ ಡ್ರಗ್ಸ್ ಆರೋಪ ಪ್ರಕರಣ ನೋವು ತರಿಸಿದೆ ಎಂದಿದ್ದಾರೆ.

ಡ್ರಗ್​ ಜಾಲದ ನಂಟಿನ ಆರೋಪ ಕುರಿತು ನಟ ಅನಿರುದ್ಧ್ ಪ್ರತಿಕ್ರಿಯೆ

ಡ್ರಗ್ಸ್ ಅನ್ನೋ ಪಿಡುಗು ಪ್ರಪಂಚದಾದ್ಯಂತ ಇದೆ. ಇದು ಕೇವಲ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಅಲ್ಲ, ಎಲ್ಲಾ ರಂಗದಲ್ಲಿಯೂ ಇದೆ ಎಂದರು. ನಟಿ ರಾಗಿಣಿಯನ್ನು ಪೊಲೀಸರು ಬಂಧಿಸಿದ ವಿಚಾರ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಈ ರೀತಿ ನಡೆಯುತ್ತಿರೋದು ನೋವಿನ ಸಂಗತಿ. ನಾವು ಹಿರಿಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ಬೆಳೆಯಬೇಕು. ನಮ್ಮನ್ನ ನೋಡಿ ಸಮಾಜ ಮತ್ತು ಮಕ್ಕಳು ಕಲಿಯುತ್ತಾರೆ ಎಂದರು.

ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನು ಬಿಟ್ಟು ಹೋಗಬೇಕು. ಹಿರಿಯರು ಹಾಕಿದ ಬುನಾದಿಯನ್ನು ನಾವು ಕೆಡಿಸಬಾರದು. ಹಾಗಾಗಿ ಆ ಹಾದಿಯಲ್ಲಿ ನಾವು ಸಾಗಬೇಕಿದೆ ಎಂದರು. ಸ್ಯಾಂಡಲ್‌ವುಡ್‌ನ ಜವಾಬ್ದಾರಿ ಕೇವಲ ಒಬ್ಬರದ್ದಲ್ಲ ಎಲ್ಲರದ್ದು. ಎಲ್ಲರು ಕೂಡ ಇದೀಗ ಸ್ಯಾಂಡಲ್‌ವುಡ್ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.