ETV Bharat / state

1.50 ಲಕ್ಷ ರೂ. ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಜಂಟಿ ನಿರ್ದೇಶಕ, ಉಪನಿರ್ದೇಶಕಿ

ಮೈಸೂರು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಉಪನಿರ್ದೇಶಿಕಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.

ಮೈಸೂರು
ಮೈಸೂರು
author img

By

Published : Feb 1, 2022, 11:17 AM IST

ಮೈಸೂರು: ಸರ್ಕಾರದ 25 ಲಕ್ಷ ರೂ. ಸಬ್ಸಿಡಿ ಬಿಡುಗಡೆ ಮಾಡಲು ಉದ್ಯಮಿಯಿಂದ 1.50 ಲಕ್ಷ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೈಸೂರು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಉಪನಿರ್ದೇಶಿಕಿ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮೈಸೂರು ತಾಲೂಕಿನ ಕೈಗಾರಿಕಾ ಪ್ರದೇಶದ ನಿವಾಸಿಯೊಬ್ಬರು ಸಣ್ಣ ಪ್ರಮಾಣದ ಕೈಗಾರಿಕೆ ಸ್ಥಾಪಿಸಲು 2 ಕೋಟಿ ರೂ. ಸಾಲವನ್ನು 2019 ರಲ್ಲಿ ಕರ್ನಾಟಕ ಸ್ಟೇಟ್ ಫೈನಾನ್ಸ್ ಕಾರ್ಪೊರೇಷನ್​ನಿಂದ ಪಡೆದಿದ್ದರು‌. ನಂತರ ಸಣ್ಣ ಕೈಗಾರಿಕಾ ಕಂಪನಿಯನ್ನ ಪ್ರಾರಂಭಿಸಿದ್ದರು.

ಇವರು ಪಡೆದ ಸಾಲಕ್ಕೆ ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮಂಜೂರಾಗಿತ್ತು. ಆದರೆ, ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡಲು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಡಿ.ಕೆ.‌ಲಿಂಗರಾಜು ಹಾಗೂ ಉಪನಿರ್ದೇಶಕಿ ಎಲ್ ಮೇಘಲಾ ಅವರು ಉದ್ಯಮಿ ಬಳಿ 1.50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು.

ಉದ್ಯಮಿಗೆ ಒತ್ತಡ ಹೇರಿ ಮುಂಗಡವಾಗಿ 25 ಸಾವಿರ ರೂ. ಪಡೆದಿದ್ದರು. ನಂತರ ಉಳಿದ ಹಣಕ್ಕಾಗಿ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಉದ್ಯಮಿ, ಎಸಿಬಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಎಸಿಬಿ ಹಾಗೂ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿ.ಕೆ.ಲಿಂಗರಾಜು ಕಚೇರಿಯಲ್ಲಿ 1.35 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರು ಅಧಿಕಾರಿಗಳನ್ನ ರೆಡ್ ಹ್ಯಾಡ್ ಆಗಿ ಹಿಡಿದು ಬಂಧಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.