ಮೈಸೂರು : ಬೆಂಗಳೂರಿನ ಬಿಡಿಎ ಭೂ ಸ್ವಾಧೀನ ಅಧಿಕಾರಿಯಾಗಿದ್ದ ಡಾ. ಸುಧಾ ಅವರ ಮೈಸೂರಿನ ಸಂಬಂಧಿಗಳ ನಿವಾಸದ ಮೇಲೂ ಸಹ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೈಸೂರಿನ ಬೇಮೆಲ್ ಲೇಔಟ್‌ನಲ್ಲಿರುವ ಸುಧಾ ಅವರ ಸಂಬಂಧಿಯ ನಿವಾಸದ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು, ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಬೆಂಗಳೂರು ಮತ್ತು ಮೈಸೂರು ಎಸಿಬಿ ಅಧಿಕಾರಿಗಳನ್ನೊಳಗೊಂಡ ತಂಡ ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಓದಿ:ಅಕ್ರಮ ಆಸ್ತಿಗಳಿಕೆ ಆರೋಪ ; ಕೆಎಎಸ್ ಅಧಿಕಾರಿ ಡಾ. ಬಿ ಸುಧಾ ಮನೆ-ಕಚೇರಿ ಮೆಲೆ ಎಸಿಬಿ ದಾಳಿ!
9 ಜನ ಅಧಿಕಾರಿಗಳ ತಂಡದಿಂದ ದಾಳಿ ಮಾಡಲಾಗಿದ್ದು, ಮೈಸೂರು ಹಾಗೂ ಬೆಂಗಳೂರು ಎಸಿಬಿ ಅಧಿಕಾರಿಗಳ ತಂಡ ಪ್ರಿಂಟರ್, ಲ್ಯಾಪ್‌ಟಾಪ್, ದಾಖಲೆ ಪತ್ರಗಳನ್ನ ಕೊಂಡೊಯ್ದಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳಿಗೆ, ಸುಧಾ ಸಂಬಂಧಿಗಳು, ನಾವು ಎಲ್ಲ ಐಟಿ ದಾಖಲೆಗಳನ್ನ ಸಲ್ಲಿಸಿದ್ದೇವೆ. ನಮ್ಮ ದಾಖಲೆಗಳು ಕಾನೂನು ಬದ್ಧವಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.