ಮೈಸೂರು: ಆಧುನಿಕ ಜಗತ್ತಿನಲ್ಲಿ ಪೋಷಕರು ಹಾಗೂ ಮಕ್ಕಳ ನಡುವೆ ಅನ್ಯೋನ್ಯತೆ ಸಂಬಂಧ ಕಡಿಮೆ ಆಗುತ್ತಿದೆ. ಇದರಿಂದ ಬೆಳೆಯುತ್ತಿರುವ ಮಕ್ಕಳಲ್ಲಿ ಖಿನ್ನತೆ ಹಾಗೂ ಇನ್ನಿತರ ಆಲೋಚನೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪೋಷಕರಲ್ಲಿ ತಮ್ಮ ಮಕ್ಕಳ ಜೊತೆಗೆ ಯಾವ ರೀತಿ ಸಂಬಂಧ ಇಟ್ಟುಕೊಳ್ಳಬೇಕೆಂಬ ಬಗ್ಗೆ ಜಾಗೃತಿ ಮೂಡಿಸಲು, ಮೈಸೂರಿನ ಸ್ಟುಡೆಂಟ್ ಕೌನ್ಸಿಲರ್ ವೇದಾಪ್ರದಾ ಅವರು ಉಚಿತವಾಗಿ ಪೋಷಕರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಾಗಾರದ ಮೂಲ ಉದ್ದೇಶ, ಪೋಷಕರು ಹಾಗೂ ಮಕ್ಕಳ ನಡುವಿನ ಸಂಬಂಧ ಹಾಗೂ ಮೊಬೈಲ್ಅನ್ನು ಬೇಕಾಬಿಟ್ಟಿಯಾಗಿ ಮಕ್ಕಳಿಗೆ ನೀಡುವುದರಿಂದ ಆಗುವ ಪರಿಣಾಮಗಳ ಕುರಿತು ಅವರು ನೀಡಿದ ಸಂದರ್ಶನದಲ್ಲಿ ಹೀಗೆ ತಿಳಿಸುತ್ತಾರೆ.
ಕೋಪ ಬಂದಾಗ ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು: ಪೋಷಕರು, ಮಕ್ಕಳ ಜೊತೆಗೆ ಯಾವ ರೀತಿ ನಡೆದುಕೊಳ್ಳಬೇಕು. ದಾರಿ ತಪ್ಪಿದ ಮಕ್ಕಳನ್ನು ಯಾವ ರೀತಿ ಸರಿದಾರಿಗೆ ತರಬೇಕು ಎಂಬುದರ ಬಗ್ಗೆ ಮೈಸೂರಿನ ಪವರ್ ಫುಲ್ ಮೈಂಡ್ ವರ್ಕ್ ಶಾಪ್ ಪ್ರೇರಣ ಅಕಾಡೆಮಿ, ಈ ಭಾನುವಾರ ಉಚಿತ ಕಾರ್ಯಾಗಾರವನ್ನು ಪೋಷಕರಿಗಾಗಿ ಏರ್ಪಡಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮಕ್ಕಳ ತಂದೆ-ತಾಯಿಗಳು, ಪೋಷಕರು ಭಾಗವಹಿಸಬೇಕು. ಈ ಕಾರ್ಯಾಗಾರದಲ್ಲಿ ತಂದೆ-ತಾಯಿಗಳು ಮಕ್ಕಳ ಜೊತೆಗೆ ಹೇಗೆ ನಡೆದುಕೊಳ್ಳಬೇಕು. ಕೋಪ ಬಂದಾಗ ಮಕ್ಕಳೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬುದರ ಕುರಿತು ಅರಿವು ಮೂಡಿಸಲಾಗುವುದು ಎಂದು ವೇದಪ್ರದಾ ತಿಳಿಸಿದರು.
ಇತ್ತಿಚೆಗೆ ಮಕ್ಕಳ ಹಾಗೂ ಪೋಷಕರ ನಡುವೆ ಬಾಂಧವ್ಯ ಕಡಿಮೆ ಆಗುತ್ತಿದ್ದು, ಇದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳು ದಾರಿ ತಪ್ಪುತ್ತಾರೆ. ಆಗ ಪೋಷಕರು ಮನೋರೋಗ ತಜ್ಞರ ಬಳಿ ಹೋಗುವುದಿಲ್ಲ. ಅಂತಹ ಸಂದರ್ಭದಲ್ಲಿ ತಂದೆ-ತಾಯಿ ಏನು ಮಾಡಬೇಕು ಎನ್ನುವ ಕುರಿತು ಮಾರ್ಗದರ್ಶನ ಮಾಡಲಾಗುವುದು ಎಂದು ವೇದಪ್ರದಾ ವಿವರಿಸಿದರು.
ಇದನ್ನೂ ಓದಿ: ಮನೆಯಲ್ಲಿ ಒಂದು ಕೋಟಿ ಮೌಲ್ಯದ ನಿಷೇಧಿತ 1000 ಮುಖ ಬೆಲೆಯ ನೋಟುಗಳು ಪತ್ತೆ: ವಿಡಿಯೋ
ಕಾರ್ಯಕ್ರಮದ ಉದ್ದೇಶವೇನು?: ಪೋಷಕರು ತಮ್ಮ ಮಕ್ಕಳ ಜೊತೆಗೆ ಹೇಗೆ ನಡೆದುಕೊಳ್ಳಬೇಕು, ತಮ್ಮ ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ, ಆ ವಾತಾವರಣ ಹೇಗಿದೆ? ಮಕ್ಕಳ ಮೇಲೆ ಆ ವಾತಾವರಣ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಈ ಕಾರ್ಯಾಗಾರದಲ್ಲಿ ಪೋಷಕರಿಗೆ ತಿಳಿಸಲಾಗುವುದು. ಇದರ ಜೊತೆಗೆ ಮಕ್ಕಳ ಜೊತೆ ಪೋಷಕರು ಯಾವ ರೀತಿ ವರ್ತಿಸಬೇಕು. ಗಂಡ-ಹೆಂಡತಿಯರ ಸಂಬಂಧ ಹೇಗಿರಬೇಕು, ಸಿಂಗಲ್ ಪೇರೆಂಟ್ನಿಂದ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬಿರುತ್ತದೆ. ಅಂದರೆ, ಈ ಮಕ್ಕಳು ವಿಪರೀತ ಕೋಪ, ಮಾತಿನ ಮೇಲೆ ನಿಯಂತ್ರಣ ಇಲ್ಲದಿರುವುದು, ಅತಿ ಹೆಚ್ಚಾಗಿ ಫೋನ್ ಬಳಸುವುದು ಕಂಡುಬರುತ್ತದೆ, ಆಗ ಪೋಷಕರು ಏನು ಮಾಡಬೇಕು ಎಂಬುದನ್ನು ಈ ಕಾರ್ಯಾಗಾರದಲ್ಲಿ ಮನವರಿಕೆ ಮಾಡಿಕೊಡಲಾಗುವುದು ಎಂದು ವೇದಪ್ರದಾ ತಿಳಿಸಿದರು. ಮಕ್ಕಳೊಂದಿಗೆ ಪೋಷಕರು ಯಾವ ರೀತಿ ವರ್ತಿಸಬೇಕು, ಅವರನ್ನು ಸರಿದಾರಿಗೆ ತರಬೇಕಾದರೆ ಏನು ಮಾಡಬೇಕು ಎನ್ನುವ ಕುರಿತು ಅವರು ವಿವರಿಸಿದರು.
ಇದನ್ನೂ ಓದಿ: ಶಿಕ್ಷಣವಿಲ್ಲ, ಕೆಲಸವೂ ಇಲ್ಲ..: ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯ!