ಮೈಸೂರು : ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದ್ದು, ಚಾಲಕ ಕುಡಿದು ಡಿಕ್ಕಿ ಹೊಡೆದಿದ್ದಾನೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಗಾಯತ್ರಿಪುರಂನ ಪಾರ್ಕ್‌ವೊಂದರ ಮುಂದಿದ್ದ ವಿದ್ಯುತ್ ಕಂಬಕ್ಕೆ ಪೊಲೀಸ್ ವಾಹನವೊಂದು ಢಿಕ್ಕಿ ಹೊಡೆದಿದೆ. ನಂತ್ರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಬಂದ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕುಡಿದು ಚಾಲಕ ಈ ಅಪಘಾತವೆಸಗಿದ್ದಾನೆ ಎಂದು ಆರೋಪ ಮಾಡಿದ್ದಾರೆ.