ಮೈಸೂರು: ಲೋ ಬಿಪಿಯಾಗಿ ಕುಸಿದು ಬಿದ್ದ ವೃದ್ಧೆಯನ್ನು ಕರೆದುಕೊಂಡು ಹೋಗಲು ಬಂದ ಆ್ಯಂಬ್ಯುಲೆನ್ಸ್ ಸ್ಥಳಕ್ಕಾಗಮಿಸಿ ಕೆಟ್ಟು ನಿಂತ ಪರಿಣಾಮ ವೃದ್ಧೆಯ ಪ್ರಾಣ ಪಕ್ಷಿ ಹಾರಿಹೋಗಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.
ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿ ಯಾಚೇನಹಳ್ಳಿ ಗ್ರಾಮದ ಬೋರಮ್ಮ(55) ಮೃತ ವೃದ್ಧೆ. ಲೋ ಬಿಪಿಯಾಗಿ ಕುಸಿದು ಬಿದ್ದ ವೃದ್ಧೆಯನ್ನು ಚಿಕಿತ್ಸೆಗಾಘಿ ಕರೆದೊಯ್ಯಲು 108 ಆ್ಯಂಬುಲೆನ್ಸ್ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ವೃದ್ಧೆ ಕರೆದೊಯ್ಯಲು ಸ್ಥಳಕ್ಕಾಗಮಿಸಿ 108 ವಾಹನ ಕೆಟ್ಟು ನಿಂತಿದೆ.
ಬಳಿಕ ಖಾಸಗಿ ವಾಹನದಲ್ಲಿ ವೃದ್ಧೆಯನ್ನು ಕುಟುಂಬಸ್ಥರು ಮಂಡ್ಯದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕೆಟ್ಟು ನಿಂತ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾಋಎ. ಅಲ್ಲದೆ ಆರೋಗ್ಯ ಇಲಾಖೆಯು ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಈ ರೀತಿ ಅನಾಹುತವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.