ETV Bharat / state

ವಾಸಿಸಲು ಸೂರಿಲ್ಲ, ಮಗನ ಓದಿಸಲು ಹಣವಿಲ್ಲ.. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಮಹಿಳೆ - Woman Doesnt Have Basic Needs in Mysore

ಸೂಕ್ತವಾದ ಸೂರು, ಇರುವ ಮನೆಗೆ ಕರಂಟ್​ ಯಾವುದೂ ಇಲ್ಲ.. ಒಪ್ಪೊತ್ತಿನ ಊಟಕ್ಕೂ ಪರದಾಟ- ಬಡ ಮಹಿಳೆಗೆ ಬೇಕಿದೆ ಸಹೃದಯಿಗಳ ನೆರವು

a-labor-woman-from-mysore-dont-have-basic-needs-to-live
ಮಗನನ್ನು ಓದಿಸಲು ಹಣವಿಲ್ಲ, ವಾಸಿಸಲು ಸರಿಯಾದ ಸೂರಿಲ್ಲ : ಸಂಕಷ್ಟದಲ್ಲಿರುವ ಮಹಿಳೆ
author img

By

Published : Jul 19, 2022, 3:43 PM IST

ಮೈಸೂರು: ಒಂದೆಡೆ ವಾಸಕ್ಕೆ ಯೋಗ್ಯವಾದ ಸೂರಿಲ್ಲ. ಇನ್ನೊಂದೆಡೆ ದುಡಿಯಲು ಕೆಲಸವಿಲ್ಲ. ಮತ್ತೊಂದೆಡೆ ಮಗನನ್ನು ಓದಿಸಲು ಹಣವಿಲ್ಲ. ಇದು ಸಂಕಷ್ಟದಲ್ಲಿರುವ ಪೌರಕಾರ್ಮಿಕ ಮಹಿಳೆಯ ಕರಳು ಹಿಂಡುವಂತಿರುವ ನೋವಿನ ಕಥೆ.

ಹೌದು, ನಂಜನಗೂಡು ತಾಲ್ಲೂಕಿನ ದುಗ್ಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪುರ ಗ್ರಾಮದ ಪೌರಕಾರ್ಮಿಕ ಮಹಿಳೆ ರುಕ್ಮಿಣಿ(40) ಸಂಕಷ್ಟ ಅನುಭವಿಸುತ್ತಿರುವ ವಿಧವೆ. ಇವರ ಪತಿ ದೊಡ್ಡಮಾದ, ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಾಗಿ ದುಡಿದಿದ್ದು, ಕಳೆದ 6 ವರ್ಷದ ಹಿಂದೆ ಅಕಾಲಿಕವಾಗಿ ನಿಧನರಾಗಿದ್ದಾರೆ.

ಮಗನನ್ನು ಓದಿಸಲು ಹಣವಿಲ್ಲ, ವಾಸಿಸಲು ಸರಿಯಾದ ಸೂರಿಲ್ಲ : ಸಂಕಷ್ಟದಲ್ಲಿರುವ ಮಹಿಳೆ

ರುಕ್ಮಿಣಿಯವರು ಕೂಡ ಇದೇ ಗ್ರಾಮ ಪಂಚಾಯಿತಿಯಲ್ಲಿ ಮಾಸಿಕ 2000 ವೇತನಕ್ಕೆ ಪೌರಕಾರ್ಮಿಕರಾಗಿ ದುಡಿಯುತ್ತಿದ್ದರು. ಆದರೆ ಸರಿಯಾದ ಸಮಯಕ್ಕೆ ವೇತನ ಸಿಗದೇ ಜೀವನ ನಡೆಸಲು ತುಂಬಾ ಕಷ್ಟವಾದ್ದರಿಂದ ಪೌರಕಾರ್ಮಿಕ ಕೆಲಸವನ್ನು ಬಿಟ್ಟು ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋದರು. ಕೊರೊನಾ ನಂತರ ಕೂಲಿ ಕೆಲಸವೂ ಸರಿಯಾಗಿ ಸಿಗದೇ ಬದುಕು ನಡೆಸುವುದು ದುಸ್ತರವಾಗಿದೆ. ಸದ್ಯ ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜೊತೆಗೆ ಇವರಿಗೆ ವಾಸಿಸಲು ಯೋಗ್ಯವಾದ ಮನೆಯೂ ಇಲ್ಲ. ಇರುವ ಮನೆ ಮಳೆ ಬಂದಾಗ ಸೋರುತ್ತಿದ್ದು, ಕರೆಂಟ್​ ವ್ಯವಸ್ಥೆ ಕೂಡ ಇಲ್ಲ. ಇದು ಯಾವಾಗ ಕುಸಿಯುತ್ತದೆ ಎಂಬ ಆತಂಕವೂ ಇವರನ್ನು ಕಾಡುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ, ಹಲವು ಬಾರಿ ಮನೆ ನಿರ್ಮಿಸಿಕೊಡಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ರುಕ್ಮಿಣಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೇಳಿಕೊಂಡಿದ್ದಾರೆ.

ಓದಿ : ಭಾರತೀಯ ವರನ ಕೈ ಹಿಡಿದ ರಷ್ಯಾ ಬೆಡಗಿ.. ಅದ್ಧೂರಿ ಮದುವೆಯಲ್ಲಿ ನಾಲ್ಕು ದೇಶಗಳು ಭಾಗಿ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.