ETV Bharat / state

ಕೆಆರ್​ಎಸ್​ ಹಿನ್ನೀರಲ್ಲಿ ತಂದೆ-ಮಗ ನೀರುಪಾಲು - KR City Police Station

ನೀರು ಕುಡಿಯಲು ಹೋದ ಜಾನುವಾರುಗಳು ಒಂದೇ ಬಾರಿಗೆ ನೀರಿನೊಳಗೆ ಎಳೆದುಕೊಂಡು ಹೋಗಿದ್ದು, ಈ ವೇಳೆ ಆಯತಪ್ಪಿ ತಂದೆ ನೀರಿನಲ್ಲಿ ಮುಳುಗಿದ್ದಾರೆ. ಬಳಿಕ ತಂದೆಯನ್ನು ರಕ್ಷಿಸಲು ಹೋದ ಮಗನೂ ಸಹ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.

A father-son drowned in water when they gone for drinks water to cattle in KRS backwater
ಕೆಆರ್​ಎಸ್​ ಹಿನ್ನೀರಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಹೋದ ತಂದೆ-ಮಗ ನೀರುಪಾಲು
author img

By

Published : Jul 24, 2020, 4:44 PM IST

ಮೈಸೂರು: ಜಾನುವಾರುಗಳಿಗೆ ನೀರು ಕುಡಿಸಲೆಂದು ಹೋದ ಅಪ್ಪ-ಮಗ ನೀರು ಪಾಲಾಗಿರುವ ಘಟನೆ ಮೂಲೆಪೆಟ್ಟು ಗ್ರಾಮದ ಸಮೀಪ ಕೆಆರ್​​​​​ಎಸ್ ಹಿನ್ನೀರಿನಲ್ಲಿ ನಡೆದಿದೆ.

ನೀರುಪಾಲಾದ ತಂದೆ ಸುರೇಶ್ (46) ಹಾಗೂ ಮಗ ವಿಕಾಸ್ (16) ಇಬ್ಬರು ಮೂಲೆಪೆಟ್ಟು ಗ್ರಾಮದ ನಿವಾಸಿಗಳಾಗಿದ್ದಾರೆ. ತಂದೆ-ಮಗ ಜಾನುವಾರುಗಳಿಗೆ ನೀರು ಕುಡಿಸಲು ಕೆಆರ್​​​ಎಸ್​​​ ಹಿನ್ನೀರಿಗೆ ಬಂದಿದ್ದು, ನೀರು ಕುಡಿಯಲು ಹೋದ ಜಾನುವಾರುಗಳು ಜೋರಾಗಿ ಎಳೆದಿದ್ದು ಇದರಿಂದ ಆಯ ತಪ್ಪಿದ ಅಪ್ಪ ನೀರಿನಲ್ಲಿ ಮುಳುಗಿದ್ದಾರೆ.

ಬಳಿಕ ಅಪ್ಪನನ್ನು ರಕ್ಷಿಸಲು ಹೋದ ಮಗ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪತ್ನಿ ಕೆ.ಆರ್. ನಗರ ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜುಗಾರರ ಸಹಾಯದಿಂದ ಇಬ್ಬರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.