ETV Bharat / state

ಮೈಸೂರಲ್ಲಿ ಕೊರೊನಾ ಸೋಂಕಿನಿಂದ ಮಗನ ಬಳಿಕ ತಂದೆಯೂ ಬಲಿ!

ಸಾಂಸ್ಕೃತಿಕ ನಗರಿಯಲ್ಲಿ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದ್ದು, ನಾಲ್ಕು ದಿನಗಳ ಅಂತರದಲ್ಲಿ ತಂದೆ-ಮಗ ಇಬ್ಬರೂ ಕೊರೊನಾಗೆ ಬಲಿಯಾಗಿದ್ದಾರೆ. ಪತ್ನಿ, ಹೆಣ್ಣು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

author img

By

Published : Jul 18, 2020, 12:14 PM IST

coronavirus at Mysore
ಕೊರೊನಾ ಸೋಂಕಿನಿಂದ ತಂದೆ-ಮಗನ ಸಾವು

ಮೈಸೂರು: ನಗರದ ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಜಿನಿಯರ್​ವೊಬ್ಬರ ಕುಟುಂಬಕ್ಕೆ ಕೊರೊನಾ ವಕ್ಕರಿಸಿದ್ದು, ಮಗನ ನಂತರ ತಂದೆಯೂ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ 12 ವರ್ಷದ ಪುತ್ರ ಸಾವನ್ನಪ್ಪಿದರೆ, ನಿನ್ನೆ ರಾತ್ರಿ ತಂದೆ ಬಲಿಯಾಗಿದ್ದಾರೆ. ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದ್ದು, ಕಳೆದ ಶುಕ್ರವಾರ ಕೊರೊನಾ ಪಾಸಿಟಿವ್ ದೃಢವಾದ ಹಿನ್ನೆಲೆ ಪತ್ನಿ, ಮೂವರು ಮಕ್ಕಳ ಸಮೇತ ಎಂಜಿನಿಯರ್ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆ ಸೋಂಕಿತ ಎಂಜಿನಿಯರ್ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಮಕ್ಕಳು, ಪತ್ನಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು, ಪತ್ನಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನಗಳ ಹಿಂದೆ 12 ವರ್ಷದ ಪುತ್ರ ಮೃತಪಟ್ಟಿದ್ದ. ಈಗ ಮಗನ ಸಾವಿನ ನಂತರ ತಂದೆಯೂ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಪುತ್ರನ ಅಂತಿಮ ದರ್ಶನ ಪಡೆಯಲಾಗದ ತಂದೆ-ತಾಯಿ, ಅಕ್ಕಂದಿರು ಕಣ್ಣೀರು ಹಾಕುತ್ತಿದ್ದರು. ಇದೀಗ ತಂದೆಯೂ ಸಾವನ್ನಪ್ಪಿದ್ದು, ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಪತ್ನಿ, ಹೆಣ್ಣು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಆರೋಗ್ಯ ಇಲಾಖೆ ಮಾರ್ಗದರ್ಶನದಂತೆ ಎಂಜಿನಿಯರ್ ಅಂತ್ಯಕ್ರಿಯೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.