ETV Bharat / state

ಮಾರುಕಟ್ಟೆಯಲ್ಲಿ ಸಿಗದ ಬೆಲೆ: 5 ಲಕ್ಷ ಮೌಲ್ಯದ ಬೆಳೆ ನಾಶ ಮಾಡಿದ ರೈತ - mysore latest news

ತಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಯ ರೈತ ಮಹದೇವಣ್ಣ ಎಂಬುವವರು ತಾವು ಬೆಳೆದಿದ್ದ ಎಲೆಕೋಸನ್ನು ನಾಶ ಮಾಡಿದ್ದಾರೆ.

5 ಲಕ್ಷ ಮೌಲ್ಯದ ಬೆಳೆ ನಾಶ ಮಾಡಿದ ರೈತ
5 ಲಕ್ಷ ಮೌಲ್ಯದ ಬೆಳೆ ನಾಶ ಮಾಡಿದ ರೈತ
author img

By

Published : Apr 21, 2020, 3:27 PM IST

ಮೈಸೂರು: ಮಾರುಕಟ್ಟೆಯಲ್ಲಿ ಎಲೆ ಕೋಸಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಹಿನ್ನೆಲೆ ಎಲ್ಲವನ್ನು ವಾಪಸ್ ​ತಂದ ರೈತ, ತಮ್ಮ ಜಮೀನಿಗೆ ಸುರಿದು ಹಾಗೂ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬೆಳಯನ್ನೂ ನಾಶ ಮಾಡಿದ್ದಾರೆ.

ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಯ ರೈತ ಮಹದೇವಣ್ಣ ಎಂಬುವವರು ತಮ್ಮ 2 ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದರು. ಇದನ್ನು ಖರೀದಿಮಾಡಲು ಯಾರೊಬ್ಬರೂ ಬಾರದ ಕಾರಣ ಹಾಗೂ ಸರಿಯಾದ ಬೆಲೆ ಸಿಗದ ಕಾರಣ ಎಲ್ಲವನ್ನು ಮತ್ತೆ ಟ್ರ್ಯಾಕ್ಟರ್​​​​ಗೆ ತುಂಬಿಕೊಂಡು ಬಂದು ತಮ್ಮ ಜಮೀನಿನಲ್ಲಿ ಸುರಿದು ನಾಶ ಮಾಡಿದ್ದಾರೆ.

ಇನ್ನು ಕೆಲ ಜನರಿಗೆ ಉಚಿತವಾಗಿ ಎಲೆಕೋಸು ವಿತರಣೆ ಮಾಡಿದ್ದಾರೆ. ನಾಶ ಮಾಡಿದ ಎಲೆಕೋಸಿನ ಮೌಲ್ಯ ಐದು ಲಕ್ಷವಾಗಿದ್ದು, ರೈತ ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.