ETV Bharat / state

ನವರಾತ್ರಿ ಉತ್ಸವಕ್ಕೆ ಅದ್ಧೂರಿ ಚಾಲನೆ.. ರಾಜಪೋಷಾಕಿನಲ್ಲಿ ಯದುವೀರ ರಾಜಗಾಂಭೀರ್ಯ.. ಇಷ್ಟೊಂದ್‌ ಸುಂದರ ಮೈಸೂರು ದಸರಾ.. - dasara update

ನಾಡಹಬ್ಬ ದಸರಾಗೆ ಮೈಸೂರಿನ ಅರಮನೆಯಲ್ಲಿ ರಾಜಕುಮಾರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದ್ದಾರೆ.

ಮೈಸೂರಿನಲ್ಲಿ ನವರಾತ್ರಿ ಉತ್ಸವಕ್ಕೆ ಅದ್ಧೂರಿ ಚಾಲನೆ
author img

By

Published : Sep 29, 2019, 11:19 AM IST

ಮೈಸೂರು: ಇಂದಿನಿಂದ ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ರಾಜಪರಂಪರೆಯ ನವರಾತ್ರಿ ಉತ್ಸವಕ್ಕೆ ಚಾಲನೆ ದೊರಕಿದೆ. ರಾಜಪೋಷಾಕಿನಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಗಾಂಭೀರ್ಯದಿಂದಲೇ ಕಂಗೊಳಿಸುತ್ತಿದ್ದಾರೆ.

ಮೈಸೂರಿನಲ್ಲಿ ನವರಾತ್ರಿ ಉತ್ಸವಕ್ಕೆ ಅದ್ಧೂರಿ ಚಾಲನೆ..

ಬೆಳಗ್ಗೆ 5:10 ರಿಂದ 5:30ರ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖವಾಡ ಜೋಡಣೆ ಮಾಡಲಾಯಿತು. ಬೆಳಗ್ಗೆ 8:05 ರಿಂದ 8:55ರ ಶುಭ ಸಮಯದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ ಆಗಿದೆ. ಅರಮನೆ ಒಳ ಆವರಣದ ಚಾಮುಂಡಿ ತೊಟ್ಟಿಯಲ್ಲಿ ಕಂಕಣಧಾರಣೆ, ನಂತರ ವಾಣಿವಿಲಾಸ ದೇವರಮನೆಯಲ್ಲಿ ಕಂಕಣಧಾರಣೆಯನ್ನು ಮಾಡಲಾಗಿದೆ.

ಅರಮನೆಯ ಸವಾರಿ ತೊಟ್ಟಿಗೆ ಬೆಳಗ್ಗೆ 9:30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನ ಆಗಮನವಾಗಿದ್ದು, ಬೆಳಗ್ಗೆ 9:50 ರಿಂದ 10:35ರವರೆಗೆ ಕಳಸ ಪೂಜೆಯ ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಐದನೇ ಬಾರಿ ಸಿಂಹಾಸನರೋಹಣ ಮಾಡಿದ್ದಾರೆ. ಖಾಸಗಿ ದರ್ಬಾರ್ ನಂತರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡೇಶ್ವರಿ ಮೂರ್ತಿಯನ್ನು ತರಲಾಗುವುದು. ಈ ಮೂಲಕ ಮೊದಲ ದಿನದ ಅರಮನೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

Intro:ಅರಮನೆBody:ಮೈಸೂರು :

ರಾಜಪರಂಪರೆ ನವರಾತ್ರಿ ಉತ್ಸವಕ್ಕೆ ಚಾಲನೆ ರಾಜಪೋಷಕಿನಲ್ಲಿ ಕಂಗೊಳಿಸುತ್ತಿರುವ ಯದುವೀರ
ಮೈಸೂರು: ಇಂದಿನಿಂದ ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ರಾಜಪರಂಪರೆಯ ನವರಾತ್ರಿ ಉತ್ಸವಕ್ಕೆ ಚಾಲನೆ ದೊರಕಿದ್ದು, ರಾಜಪೋಷಕಿನಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಗೊಳಿಸುತ್ತಿದ್ದಾರೆ.

ಬೆಳಿಗ್ಗೆ 5:10 ರಿಂದ 5:30ರ ಶುಭ ಮುಹೂರ್ತದಲ್ಲಿ ರತ್ನಖಚಿತ ಆಸನಕ್ಕೆ ಸಿಂಹ ಜೋಡಣೆಯಾಗಿದೆ.ಬೆಳಿಗ್ಗೆ 8:05 ರಿಂದ 8:55ರ ಶುಭ ಸಮಯದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆಯಾಗಿದೆಅರಮನೆ ಒಳ ಆವರಣದ ಚಾಮುಂಡಿ ತೊಟ್ಟಿಯಲ್ಲಿ ಕಂಕಣಧಾರಣೆ.
ನಂತರ ವಾಣಿವಿಲಾಸ ದೇವರಮನೆಯಲ್ಲಿ ಕಂಕಣಧಾರಣೆ.
ಬೆಳಿಗ್ಗೆ 9:30ಕ್ಕೆ ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಹಸು ಆಗಮನ.ಅರಮನೆಯ ಸವಾರಿ ತೊಟ್ಟಿಗೆ ಆಗಮನ.ಬೆಳಿಗ್ಗೆ 9:50 ರಿಂದ 10:35 ರವರೆಗೆ ಕಳಸ ಪೂಜೆ.ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ  ಸಿಂಹಾಸನರೋಹಣ.ಖಾಸಗಿ ದರ್ಬಾರ್ ನಂತರ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡೇಶ್ವರಿ ಮೂರ್ತಿಯನ್ನು ತರಲಾಗುವುದು.ಈ ಮೂಲಕ ಮೊದಲ ದಿನದ ಅರಮನೆ ಕಾರ್ಯಕ್ರಮ ಮುಕ್ತಾಯವಾಗಲಿದೆ.ಐದನೇ ಬಾರಿ ಸಿಂಹಾಸನ ಏರಲಿರುವ ಯದುವೀರ್Conclusion:ಅರಮನೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.