ETV Bharat / state

ಮೈಸೂರು: ಸಿಎಫ್​ಟಿಆರ್​ಐ ತರಬೇತಿಯಿಂದ 'ನಂಬಿಕೆ' ಪ್ರಾಡಕ್ಟ್​, ಉದ್ಯಮಿಯಾದ ರೈತನ ಯಶೋಗಾಥೆ

ಮೈಸೂರು ಸಿಎಫ್​ಟಿಆರ್​ಐ ಆವರಣದಲ್ಲಿ ನಡೆದ 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ಸಿರಿಧಾನ್ಯಗಳಿಂದ ಅಭಿವೃದ್ಧಿಪಡಿಸಿದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ.

Farmer Mil Nagaraj
ರೈತ ಮಿಲ್ ನಾಗರಾಜ್
author img

By ETV Bharat Karnataka Team

Published : Dec 9, 2023, 6:56 PM IST

Updated : Dec 9, 2023, 8:38 PM IST

ರೈತ, ಉದ್ಯಮಿ ಮಿಲ್ ನಾಗರಾಜ್ ಈಟಿವಿ ಭಾರತದೊಂದಿಗೆ ಮಾತನಾಡಿದರು.

ಮೈಸೂರು: ಮೈಸೂರು ನಗರದ ಸಿಎಫ್​ಟಿಆರ್​ಐ ಆವರಣದಲ್ಲಿ ನಡೆದ 9ನೇ ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ಸಿರಿಧಾನ್ಯಗಳಿಂದ ಅಭಿವೃದ್ಧಿಪಡಿಸಿರುವ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ. 300ಕ್ಕೂ ಹೆಚ್ಚು ಸಿಎಫ್​ಟಿಆರ್​ಐ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಲವಾರು ಖಾಸಗಿ ಕಂಪನಿಗಳೂ ಸಹ ಸಮ್ಮೇಳನದಲ್ಲಿ ಭಾಗವಹಿಸಿವೆ.

ಗಮನಸಳೆದ ರೈತನ ಸಿರಿಧಾನ್ಯದ ನಂಬಿಕೆ ಪ್ರಾಡಕ್ಟ್; ಸಿರಿಧಾನ್ಯಗಳಿಂದ ಪ್ರೋಟೀನ್ ಪೌಡರ್ ತಯಾರಿಸುವ ತರಬೇತಿ ಪಡೆದು ತಾನೇ ಸಿರಿಧಾನ್ಯ ಮಾಲ್ಟ್ ಅನ್ನು ಉತ್ಪಾದಿಸಿ ಉದ್ಯಮಿಯಾಗಿರುವ ರೈತರೊಬ್ಬರು ಮೇಳದಲ್ಲಿ ಎಲ್ಲರ ಗಮನಸೆಳೆದರು. ಇಂದು ನಡೆದ 9ನೇ ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಸಿರಿಧಾನ್ಯದ ಮಾಲ್ಟ್ ಅನ್ನು ಉಚಿತವಾಗಿ ವಿತರಿಸಿ 'ನಂಬಿಕೆ' ಪ್ರಾಡಕ್ಟ್​ ಮಹತ್ವದ ಬಗ್ಗೆ ರೈತ, ಉದ್ಯಮಿ ಮಿಲ್ ನಾಗರಾಜ್ ಅವರು ಗ್ರಾಹಕರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರೈತ ಮಿಲ್ ನಾಗರಾಜು ಈಟಿವಿ ಭಾರತ ಜೊತೆ ಮಾತನಾಡಿ, ಸಿ ಎಫ್ ಟಿ ಆರ್ ಐ ನಿಂದ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸಬೇಕೆಂದು ನಿರ್ಧರಿಸಿದೆ. ನಂತರ ಕೆಲ ದಿನಗಳಲ್ಲಿ ಹೆಚ್ ಡಿ ಕೋಟೆಯಲ್ಲಿ ಸಣ್ಣದೊಂದು ಗೃಹ ಕೈಗಾರಿಕೆ ಸ್ಥಾಪನೆ ಮಾಡಿಕೊಂಡು ಸಿರಿಧಾನ್ಯ ವಿವಿಧ ಮಾಲ್ಟ್​ ಉತ್ಪಾದಿಸಲು ಶುರು ಮಾಡಿದೆ. ಆರಂಭದಲ್ಲಿ ಸಿರಿಧಾನ್ಯ ಮಾಲ್ಟ್​ ಕಡಿಮೆ ಉತ್ಪಾದಿಸುತ್ತಿದ್ದೇವು. ನಂತರ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೆಚ್ಚು ಉತ್ಪಾದನೆ ಶುರು ಮಾಡಿದೆನು. ರೈತರಿಂದ ನೇರವಾಗಿ ಸಿರಿಧಾನ್ಯ ಖರೀದಿಸುವೆ. ಗುಣಮಟ್ಟ, ಶುದ್ಧತೆಯಿಂದ ಸಿರಿಧಾನ್ಯ ಮಾಲ್ಟ್ ತಯಾರಿಸಿ ನಂಬಿಕೆ ಹೆಸರಿನಲ್ಲಿ ಪ್ರೋಟೀನ್ ಪೌಡರ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ರೈತ, ಮಣ್ಣು, ನೀರು ಉಳಿದರೆ ಅನ್ನದಾತ ಉಳಿದ ಹಾಗೆ, ಆ ಉದ್ದೇಶ ಇಟ್ಟುಕೊಂಡು ನಂಬಿಕೆ ಹೆಸರಿನ ಪ್ರೊಡಕ್ಟ್ ಅನ್ನು ಆರಂಭಿಸಿದೆ. ಅದರಲ್ಲಿ 9 ಬಗ್ಗೆಯ ಸಿರಿಧಾನ್ಯಗಳು 5 ಬಗೆಯ ಡ್ರೈ ಫ್ರೂಟ್ಸ್ ಗಳಿಂದ ತಯಾರಿಸಿದ ನಂಬಿಕೆ ಪ್ರೋಟೀನ್ ಪೌಡರ್ ಅನ್ನು ತಯಾರಿಸಲಾಗಿದೆ. ಇದು ಬಿ ಪಿ, ಶುಗರ್, ಥೈರಾಯ್ಡ್, ಕೊಲೆಸ್ಟ್ರಾಲ್, ಪಿರಿಯಡ್ ಪ್ರಾಬ್ಲಮ್, ಜಾಯಿಂಟ್ ಪೈನ್ ಸೇರಿದಂತೆ ದೇಹಕ್ಕೆ ಬೇಕಾದ ನ್ಯೂಟ್ರಿಷನ್ ಅನ್ನು ನೀಡುತ್ತದೆ ಎಂದು ನಾಗರಾಜ್ ತಿಳಿಸಿದರು.

ನಾಗರಾಜ್ ಮೂಲತಃ ಟೆಂಪೋ ಡ್ರೈವರ್ ಆಗಿ ಬದುಕು ಸಾಗಿಸುತ್ತಿದ್ದರು. ಎಷ್ಟೇ ದುಡಿದರೂ ಜೀವನಕ್ಕೆ ಸಾಕಾಗುತ್ತಿರಲಿಲ್ಲ. ಆದ್ದರಿಂದ ಜೀವನದಲ್ಲಿ ಏನಾದರೂ ಮಾಡಬೇಕೆಂಬ ಚಿಂತೆಯಲ್ಲಿದ್ದೇನು. ಆ ಸಂದರ್ಭದಲ್ಲಿ ಸಿ ಎಫ್ ಟಿ ಆರ್ ಐ ತರಬೇತಿಗೆ ಆಹ್ವಾನಿಸಿತು. ತರಬೇತಿ ಪಡೆದು ನಂಬಿಕೆ ಪ್ರಾಡಕ್ಟ್​ ಹೆಸರಿನ ಸಿರಿಧಾನ್ಯ ಪ್ರೊಟೀನ್ ಪೌಡರನ್ನು ಆರಂಭಿಸಿದೆನು ಎಂದು ಮಿಲ್ ನಾಗರಾಜ್ ತಮ್ಮ ಯಶೋಗಾಥೆಯ ಬಗ್ಗೆ ವಿವರಿಸಿದರು.

ನನ್ನ ದೇಶ ಸರ್ಬಿಯಾದಲ್ಲಿ ಸಿರಿಧಾನ್ಯ ಸಿಗಲ್ಲ: ವಿದೇಶಿ ಮಹಿಳೆ

ಪ್ರಸಕ್ತ ವರ್ಷವನ್ನೂ ಅಂತಾರಾಷ್ಟ್ರೀಯ ಸಿರಿಧಾನ್ಯದ ವರ್ಷವೆಂದು ಘೋಷಿಸಲಾಗಿದೆ. ಸಿರಿಧಾನ್ಯ ಉತ್ಪಾದನೆ ಮಾಡುವ ಮಾಹಿತಿಯನ್ನು ಪಡೆಯಲು ಸರ್ಬಿಯಾ ದೇಶದಿಂದ ಬಂದಿರುವೆ. ಸರ್ಬಿಯಾ ದೇಶದಲ್ಲಿ ಸಿರಿಧಾನ್ಯ ಬೆಳೆಯುವದಿಲ್ಲ. ಇಲ್ಲಿ ಸಿರಿಧಾನ್ಯದ ವಸ್ತುಗಳನ್ನು ನೋಡಲು ಸಂತೋಷವಾಗಿದೆ. ಇದು ಸಾಂಪ್ರದಾಯಿಕ ಬೆಳೆಯಾಗಿದೆ. ದೇಹಕ್ಕೆ ಅಗತ್ಯವಿರುವ ಖನಿಜಾಂಶವನ್ನು ಅಗತ್ಯತೆಗೆ ತಕ್ಕಂತೆ ಪೂರೈಕೆ ಮಾಡುವುದರಲ್ಲಿ ಸಿರಿಧಾನ್ಯ ಸಹಕಾರಿ ಎಂದರು.

ಹಿಂದಿನ ದಿನಗಳಲ್ಲಿ ಬಡವರು ಮಾತ್ರ ಸಿರಿಧಾನ್ಯದ ಬಳಕೆಯನ್ನು ಮಾಡುತ್ತಿದ್ದರು. ಆದರೆ ಈಗ ಬಹುತೇಕ ಸಿರಿವಂತರೂ ಸಹ ಸಿರಿಧಾನ್ಯದ ಉಪಯೋಗಿಸುತ್ತಿರುವುದು ಸಂತಸದ ವಿಷಯ. ಹೀಗಾಗಿ ನಾನು ಸಹ ಆಹಾರ ಪದ್ಧತಿಯನ್ನು ಬದಲಿಸಿಕೊಂಡಿದ್ದೇನೆ. ಐದು ವರ್ಷದಿಂದ ನಾನು ಸಸ್ಯಹಾರ ಆಹಾರಗಳನ್ನು ಸೇವಿಸುತ್ತಿದ್ದೇನೆ. ನನ್ನ ದಿನ ನಿತ್ಯದ ಆಹಾರದ ಪದ್ಧತಿಯಲ್ಲಿ ನಾನು ಸಿರಿಧಾನ್ಯವನ್ನು ಬಳಸುತ್ತಿದ್ದೇನೆ. ನನ್ನ ದೇಶದ ಸ್ನೇಹಿತರು ಈ ರೀತಿಯ ವಸ್ತುಗಳನ್ನು ಉಪಯೋಗಿಸಲು ಇಷ್ಟಪಡುತ್ತಾರೆ. ಅದರೆ ನನ್ನ ದೇಶದಲ್ಲಿ ಸಿರಿಧಾನ್ಯದ ಉತ್ಪನ್ನಗಳು ದೊರೆಯುವುದಿಲ್ಲ ಎಂದು ವಿದೇಶಿ ಮಹಿಳೆ ಮಿಲಿಚ್ಚಿ ಪೋಯಿತ್ ಈಟಿವಿ ಭಾರತಕ್ಕೆ ವಿವರಿಸಿದರು.

ಇದನ್ನೂಓದಿ: ಕೃಷಿ ತ್ಯಾಜ್ಯದಿಂದಲೇ ​ಜಾಕೆಟ್, ಬ್ಯಾಗ್​, ಶೂ ತಯಾರಿಕೆ

Last Updated : Dec 9, 2023, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.