ಮೈಸೂರು: ಮಾಸ್ಕ್ ಧರಿಸದೇ ತಿರುಗಾಡುವ ಸಾರ್ವಜನಿಕರ ವಿರುದ್ಧ ಈವರೆಗೆ 17,961 ಪ್ರಕರಣ ದಾಖಲಾಗಿದ್ದು, 42,25,300 ರೂ. ಹಣ ಸಂಗ್ರಹ ಮಾಡಲಾಗಿದೆ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಜಾಗೃತಿಗಾಗಿ ಪೊಲೀಸರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಆದರೆ, ಕೊರೊನಾದ ಬಗ್ಗೆ ಅರಿವಿದ್ದರೂ ಮಾಸ್ಕ್ ಧರಿಸದೇ ಬೀದಿಗಿಳಿಯುವವರಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದ್ದೀವಿ ಎಂದರು.
ಕೊರೊನಾ ಜಾಗೃತಿಗಾಗಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಿ. ಕೊರೊನಾ ಮುಕ್ತ ಮಾಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರಾತ್ರಿ ವೇಳೆ ಅಪಘಾತ ತಪ್ಪಿಸಲು ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಅಪಘಾತದ ವಲಯ ಗುರುತಿಸಿ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.