ETV Bharat / state

ದ್ವಿತೀಯ ಪಿಯು ಫಲಿತಾಂಶ: ಶಾಸಕ ಸಾ.ರಾ.ಮಹೇಶ್ ಪತ್ನಿ ಫಸ್ಟ್ ಕ್ಲಾಸ್​​ನಲ್ಲಿ ಪಾಸ್

author img

By

Published : Jun 18, 2022, 7:24 PM IST

Updated : Jun 20, 2022, 3:52 PM IST

ಜೆಡಿಎಸ್​ ಶಾಸಕ ಸಾ.ರಾ. ಮಹೇಶ್ ಅವರ ಪತ್ನಿ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನದಲ್ಲಿ ಪಾಸ್​ ಆಗಿದ್ದಾರೆ.

karnataka PU Results
karnataka PU Results

ಮೈಸೂರು: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಜೆಡಿಎಸ್​ ಶಾಸಕ ಸಾ.ರಾ. ಮಹೇಶ್ ಅವರ ಪತ್ನಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.

ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಪತ್ನಿ ಅನಿತಾ ಅವರು ಪಿಯುಸಿ ಕಲಾವಿಭಾಗದಲ್ಲಿ 600 ಅಂಕಗಳಿಗೆ 418 ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 1993ರಲ್ಲಿ ಅನಿತಾ ಎಸ್‍ಎಸ್‍ಎಲ್​ಸಿ ಪರೀಕ್ಷೆ ಬರೆದಿದ್ದರು. ಇದೀಗ 30 ವರ್ಷಗಳ ಬಳಿಕ ಪಿಯುಸಿ ಪಾಸಾಗಿರುವುದು ಕುಟುಂಬಸ್ಥರಿಗೆ ಸಂತಸ ಮೂಡಿಸಿದೆ. ಖಾಸಗಿಯಾಗಿ ಅನಿತಾ ಪರೀಕ್ಷೆ ಬರೆದಿದ್ದರು.

ದ್ವಿತೀಯ ಪಿಯುಸಿಯಲ್ಲಿ ಶೇ. 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 68.72ರಷ್ಟು ಬಾಲಕಿಯರು ಹಾಗೂ ಶೇ. 55.22ರಷ್ಟು ಬಾಲಕರು ಪಾಸ್​ ಆಗಿದ್ದಾರೆ.

ಇದನ್ನೂ ಓದಿ: 2nd PUC results-2022.. ವಾಣಿಜ್ಯ ವಿಭಾಗದಲ್ಲಿ ಮಾನವ್ ವಿಜಯ್, ನೇಹಾ ಟಾಪರ್ಸ್​

Last Updated : Jun 20, 2022, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.