ETV Bharat / state

ಮೈಸೂರಿನ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ - Rajotsava award 2020

ಮೈಸೂರಿನ ನಾಲ್ವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಗೌರವ ಲಭಿಸಿದೆ.

2020 Rajyotsava Award Announced
ಮೈಸೂರಿನ ನಾಲ್ವರಿಗೆ ಸಂದ ಗೌರವ
author img

By

Published : Oct 28, 2020, 5:02 PM IST

ಮೈಸೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 65 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಮೈಸೂರಿನ ನಾಲ್ವರು ಸಾಧಕರಿಗೆ ಪ್ರಶಸ್ತಿ ದೊರೆತಿದೆ.

ಮೈಸೂರಿನ ಸಾಧ್ವಿ ಪತ್ರಿಕೆ ಸಂಪಾದಕ ಸಿ.ಮಹೇಶ್ವರನ್, ಖ್ಯಾತ ಆಯುರ್ವೇದ ತಜ್ಞ ಚಂದ್ರಶೇಖರ್, ಡಾ. ಪುಟ್ಟಸಿದ್ದಯ್ಯ, ಶಿಲ್ಪ ಕಲಾವಿದ ಜನಾರ್ಧನ ಮೂರ್ತಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೈಸೂರಿನ ಸಾಧ್ವಿ ಪತ್ರಿಕೆ 1899 ರಲ್ಲಿ ಅಂದರೆ ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾಗಿದ್ದು, 1994 ರಲ್ಲಿ ಸಿ.ಮಹೇಶ್ವರನ್ ಈ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಇತ್ತೀಚೆಗೆ ಈ‌ ಪತ್ರಿಕೆಗೆ ಡಿಜಿಟಲ್ ರೂಪ ಕೊಟ್ಟಿದ್ದು, ಪ್ರಿಂಟ್ ಮತ್ತು ಡಿಜಿಟಲ್ ರೂಪದಲ್ಲಿ ಪತ್ರಿಕೆಯನ್ನು ನಡೆಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಶತಮಾನೋತ್ಸವವನ್ನು ಸಹ ಆಚರಿಸಿದ್ದರು. ಈ ಬಾರಿ ಮಾಧ್ಯಮ ಕ್ಷೇತ್ರದಲ್ಲಿ ಸಿ.ಮಹೇಶ್ವರನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮೈಸೂರಿನ ಖ್ಯಾತ ಆಯುರ್ವೇದ ತಜ್ಞರಾದ ಚಂದ್ರಶೇಖರ್ ಬಡವರಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದಾರೆ. ಇವರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ.ಪುಟ್ಟಸಿದ್ದಯ್ಯ ಹಾಗೂ ಕಲಾ ವಿಭಾಗದಲ್ಲಿ ಶಿಲ್ಪ ಕಲಾವಿದ ಜನಾರ್ಧನ ಮೂರ್ತಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.