ETV Bharat / state

ಕ್ಷುಲ್ಲಕ ಕಾರಣಕ್ಕೆ ನಾಲ್ವರ ನಡುವೆ ಗಲಾಟೆ: ಇಬ್ಬರಿಗೆ ಗಂಭೀರ ಗಾಯ! - fight between youths

ನಾಲ್ವರು ಯುವಕರ ಮಧ್ಯೆ ಗಲಾಟೆ ನಡೆದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಆರೋಪಿಗಳು ಡ್ರಾಗರ್​​ನಿಂದ ಭಾಸ್ಕರ್‌ ಅವರ ದೇಹಕ್ಕೆ 5 ಕಡೆ ಹಾಗೂ ಶಶಿಕುಮಾರ್ ಅವರ ತೋಳಿಗೆ ಒಂದು ಕಡೆ ಚುಚ್ಚಿ ಪರಾರಿಯಾಗಿದ್ದಾರೆ

2 are injured in fight at mysore
ಕ್ಷುಲ್ಲಕ ಕಾರಣಕ್ಕೆ ಗಲಾಟೆ
author img

By

Published : Jul 21, 2021, 11:35 AM IST

ಮೈಸೂರು: ಕ್ಷುಲ್ಲಕ ಕಾರಣಕ್ಕೆ ನಾಲ್ವರು ಯುವಕರ ಮಧ್ಯೆ ಗಲಾಟೆ ನಡೆದು, ಇಬ್ಬರಿಗೆ ಗಾಯವಾಗಿರುವ ಘಟನೆ ಮೈಸೂರಿನ ಶ್ರೀರಾಂಪುರ ಸಮೀಪದ ರಿಂಗ್‌ ರಸ್ತೆಯಲ್ಲಿ‌ ನಡೆದಿದೆ. ಡಿ. ಸಾಲುಂಡಿ ನಿವಾಸಿಗಳಾದ ಭಾಸ್ಕರ್, ಶಶಿಕುಮಾರ್ ಗಾಯಗೊಂಡವರು. ಈ ಇಬ್ಬರಿಗೆ ಲಿಂಗಾಬುಧಿ ಪಾಳ್ಯದ ಆನಂದ್, ಅಭಿ ಡ್ರಾಗರ್​ನಿಂದ ಚುಚ್ಚಿ ಪರಾರಿಯಾಗಿದ್ದಾರೆ‌.

2 are injured in fight at mysore
ಕ್ಷುಲ್ಲಕ ಕಾರಣಕ್ಕೆ ಗಲಾಟೆ - ಗಾಯ

ಗಾರೆ ಕೆಲಸ ಮಾಡಿಕೊಂಡಿದ್ದ ಆರೋಪಿ ಆನಂದ್‌ಗೂ ಗಾಯಗೊಂಡಿರುವ ಶಶಿಕುಮಾರ್ ಅವರ ಸೋದರ ಬಸವರಾಜುವಿಗೆ ವಿಜಯನಗರದಲ್ಲಿ ಸೋಮವಾರವಷ್ಟೇ ಗಲಾಟೆ ನಡೆದಿದೆ. ಈ ವೇಳೆ, ಆನಂದ್ ಮೇಲೆ ಬಸವರಾಜು ಹಲ್ಲೆ ನಡೆಸಿದ್ದ. ಈ ಕುರಿತು ವಿಚಾರಿಸಲು ಶಶಿಕುಮಾರ್ ಸ್ನೇಹಿತ ಭಾಸ್ಕರ್‌ನೊಂದಿಗೆ ರಿಂಗ್‌ರಸ್ತೆಗೆ ಬಂದಾಗ ಹೊಡೆದಾಟ ನಡೆದಿದೆ. ತಪ್ಪಿಸಿಕೊಳ್ಳಲು ದ್ವಿ ಚಕ್ರವಾಹನದಲ್ಲಿ ಭಾಸ್ಕರ್, ಶಶಿಕುಮಾರ್ ವೇಗವಾಗಿ ಬಂದಿದ್ದಾರೆ. ಮದ್ಯದಂಗಡಿ ಸಮೀಪ ಹೆಚ್ಚಿನ ಜನರಿದ್ದು, ಯಾರಾದರೂ ರಕ್ಷಣೆಗೆ ಬರಬಹುದು ಎಂದು ವಾಹನ ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣ ಲಾಡ್ಲಾಪೂರ ಹಾಜಿಸರ್ವರ್ ದೇವರ ಹುಂಡಿಗೆ ಕನ್ನ

ಆದರೆ, ಹಿಂದಿನಿಂದ ಬಂದ ಆರೋಪಿಗಳು ಡ್ರಾಗರ್​​ನಿಂದ ಭಾಸ್ಕರ್‌ ಅವರ ದೇಹಕ್ಕೆ 5 ಕಡೆ ಹಾಗೂ ಶಶಿಕುಮಾರ್ ಅವರ ತೋಳಿಗೆ ಒಂದು ಕಡೆ ಚುಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.