ETV Bharat / state

ಮೈಸೂರು: ವರುಣಾ ಸಮೀಪ 11ನೇ ಶತಮಾನದ ಜೈನ ಮೂರ್ತಿಗಳು ಪತ್ತೆ - ಇತಿಹಾಸ ತಜ್ಞ

ವಿಗ್ರಹಗಳು ದೊರೆತ ಸ್ಥಳದಲ್ಲಿ ಹೆಚ್ಚಿನ ಉತ್ಖನನ ನಡೆಸಿದರೆ ಇನ್ನೂ ಹಲವು ಮೂರ್ತಿಗಳು ಸಿಗಬಹುದು ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ತಿಳಿಸಿದ್ದಾರೆ.

Jain idols found
ಪತ್ತೆಯಾದ ಜೈನ ವಿಗ್ರಹಗಳು
author img

By ETV Bharat Karnataka Team

Published : Jan 1, 2024, 1:28 PM IST

Updated : Jan 1, 2024, 1:57 PM IST

ಮೈಸೂರು: ವರುಣಾ ಗ್ರಾಮದಲ್ಲಿ ಚರಂಡಿ ಕಾಮಗಾರಿ ವೇಳೆ ಡಿ.26ರಂದು ಪುರಾತನ ಜೈನ ವಿಗ್ರಹಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದು ಕೂಷ್ಮಾಂಡಿನಿ ಮತ್ತು ಒಂದು ಜೈನ ತೀರ್ಥಂಕರ ಮೂರ್ತಿಗಳಾಗಿವೆ. ಇನ್ನೊಂದು ವಿಗ್ರಹದ ತಲೆ ಮಾತ್ರ ದೊರೆತಿದೆ. ಈ ಮೂರ್ತಿಗಳು ಸುಮಾರು 11ನೇ ಶತಮಾನಕ್ಕೆ ಸೇರಿದ ಗಂಗರ ಮತ್ತು ಹೊಯ್ಸಳರ ಕಾಲದ್ದು ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ. ವಿಗ್ರಹಗಳನ್ನು ಮೈಸೂರಿನಲ್ಲಿರುವ ವೆಲ್ಲಿಂಗ್ಟನ್ ಭವನದ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ರವಾನಿಸಿದ್ದು, ತಜ್ಞರು ಹೆಚ್ಚಿನ ಸಂಶೋಧನೆ ಕೈಗೊಂಡಿದ್ದಾರೆ.

Archaeology Department team
ಪುರಾತತ್ವ ಅಧಿಕಾರಿಗಳ ತಂಡ

ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೂರ್ತಿಗಳು ದೊರತಿದ್ದು, ತಕ್ಷಣವೇ ಕಾಮಗಾರಿಯನ್ನು ನಿಲ್ಲಿಸಿದ ಗ್ರಾಮಸ್ಥರು ಮೈಸೂರಿನಲ್ಲಿರುವ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆಯ ಉಪನಿರ್ದೇಶಕಿ ಮಂಜುಳಾ, ಇತಿಹಾಸ ತಜ್ಞ ಹಾಗೂ ಪಾರಂಪರಿಕ ತಜ್ಞ ಪ್ರೊ.ರಂಗರಾಜು ನೇತೃತ್ವದ ತಂಡ ಪರಿಶೀಲನೆ ನಡೆಸಿತು.

ಭಗ್ನಗೊಂಡಿರುವ ಮೂರ್ತಿಗಳು: 'ಈಟಿವಿ ಭಾರತ'ಕ್ಕೆ ಈ ಬಗ್ಗೆ ಮಾಹಿತಿ ನೀಡಿದ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು, "ಪತ್ತೆಯಾದ ಮೂರು ಜೈನ ಮೂರ್ತಿಗಳು ಭಗ್ನಗೊಂಡಿರುವ ಸ್ಥಿತಿಯಲ್ಲಿವೆ. ಕೂಷ್ಮಾಂಡಿನಿ ದೇವಿ ಮೂರ್ತಿಯ ಕೈ ಭಿನ್ನವಾಗಿದೆ. ಮತ್ತೊಂದು ಜೈನ ತೀರ್ಥಂಕರರ ವಿಗ್ರಹದ ಕೈಗಳು ಹಾಗೂ ಕಾಲುಗಳು ಭಿನ್ನವಾಗಿವೆ. ಇನ್ನೊಂದು ತಲೆಭಾಗ ಮಾತ್ರ ದೊರೆತಿದೆ. ಕಾಮಗಾರಿ ವೇಳೆ ಜೆಸಿಬಿಯಿಂದ ಹಾನಿಯಾಗಿರುವ ಸಾಧ್ಯತೆಯಿದೆ. ಗಂಗರು ಮತ್ತು ಹೊಯ್ಸಳರ ಕಾಲದಲ್ಲಿ ಈ ಗ್ರಾಮಗಳಲ್ಲಿ ಹೊಯ್ಸಳರ ದೇವಾಲಯಗಳಿದ್ದವು ಎಂಬುದಕ್ಕೆ ಇವು ಕುರುಹುಗಳು" ಎಂದು ತಿಳಿಸಿದರು.

Archaeology Department team
11ನೇ ಶತಮಾನದ ಜೈನ ಮೂರ್ತಿಗಳು ಪತ್ತೆ

"ಇನ್ನೂ ಹೆಚ್ಚಿನ ಉತ್ಖನನ ಮಾಡಿದರೆ ಇನ್ನೂ ಹಲವು ಮೂರ್ತಿಗಳು ಸಿಗಬಹುದು. ಟಿ.ನರಸೀಪುರ ಬಳಿಯ ತಲಕಾಡಿನಲ್ಲಿ ಗಂಗರ ಆಳ್ವಿಕೆಯ ಕಾಲದಲ್ಲಿ ತಲಕಾಡು, ಹೆಮ್ಮಿಗೆ, ಮೂಗೂರು, ಟಿ.ನರಸೀಪುರ, ವರಕೂಡು, ವರುಣಾ, ವಾಜಮಂಗಲ, ಮೈಸೂರಿನ ಹೊರಭಾಗ, ಕುಮಾರಬೀಡು ಮುಖ್ಯ ಜೈನ ಗ್ರಾಮಗಳಾಗಿದ್ದವು. ಶ್ರವಣಬೆಳಗೊಳಕ್ಕೆ ತೆರಳಲು ಇದೇ ಮಾರ್ಗವನ್ನು ಬಳಸುತ್ತಿದ್ದರು. ಈ ಮಾರ್ಗದಲ್ಲಿ ಜೈನ ಮೂರ್ತಿಗಳು ಇದ್ದವು" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯ ಕಲಿಕೇರಿಯಲ್ಲಿ 12ನೇ ಶತಮಾನದ ಎರಡು ಶಿಲಾ ಶಾಸನ ಪತ್ತೆ

Last Updated : Jan 1, 2024, 1:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.