ಮೈಸೂರು: ನಂಜನಗೂಡು ನಂಜುಂಡೇಶ್ವರನಿಗೆ ಭಕ್ತರು 1.52 ಕೋಟಿ ರೂ. ಕಾಣಿಕೆ ಅರ್ಪಿಸಿದ್ದಾರೆ. ದೇವಾಲಯದಲ್ಲಿ ಶುಕ್ರವಾರ ರಾತ್ರಿವರೆಗೆ 30 ಹುಂಡಿಗಳನ್ನು ಎಣಿಕೆ ಮಾಡಲಾಗಿದ್ದು, ಒಂದೇ ತಿಂಗಳಲ್ಲಿ 1,52,75,136 ರೂ.ಸಂಗ್ರಹವಾಗಿದೆ. ಜೊತೆಗೆ 167 ಗ್ರಾಂ ಚಿನ್ನ, 9 ಕೆಜಿ 150 ಗ್ರಾಂ ಬೆಳ್ಳಿ, 64 ವಿದೇಶಿ ಕರೆನ್ಸಿ ಹುಂಡಿಯಲ್ಲಿ ಸಿಕ್ಕಿದೆ.
ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ದೇವಸ್ಥಾನದ ಇಒ, ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು.
ಇದನ್ನೂ ಓದಿ: ಒಂದೇ ತಿಂಗಳಿನಲ್ಲಿ ಕೋಟ್ಯಧೀಶನಾದ ನಂಜನಗೂಡು ನಂಜುಂಡೇಶ್ವರ