ಮಂಡ್ಯ: ಇಲ್ಲೊಬ್ಬರು ಬಹಳ ಸೂರ, ಧೀರ ಮಾತುಗಳನ್ನಾಡುತ್ತಿದ್ದಾರೆ, ಅವರ ಸತ್ಯದ ಪರದೆ ಬಿಚ್ಚಲು ಶುರು ಮಾಡ್ತೀನಿ ಎಂದು ಶಾಸಕ ಅನ್ನದಾನಿ ವಿರುದ್ಧ ಮಾಜಿ ಸಚಿವ ನರೇಂದ್ರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಸದಸ್ಯರು 380 ಜನ ಇದ್ದಾರಂತೆ. ನಾನು ಸವಾಲ್ ಹಾಕ್ತೀನಿ ಆ 380 ಜನರನ್ನು ಒಂದೇ ವೇದಿಕೆ ಮೇಲೆ ತೋರಿಸಲಿ, ಮುಂದಿನ ಚುನಾವಣೆಯಲ್ಲಿ ಅವನ ಹಿಂದೆಯೇ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ಅಪಹಾಸ್ಯ ಮಾಡಿದರು.
ಯಲುಬಿಲದ್ದ ನಾಲಿಗೆ ಏನು ಬೇಕಾದರೂ ಮಾತನಾಡಬಹುದು, ಇಲ್ಲಿ ಪಕ್ಷದಾಟವಾಡಿ ಚುನಾವಣೆಗೆ ನಿಂತಿಲ್ಲ. ಕಾಂಗ್ರೆಸ್ ಕಟ್ಟಿದ ನಾವೇ ಅಧಿಕಾರದಿಂದ ವಂಚಿತರಾಗಿದ್ದೇವೆ. ಇದು ನಿಮಗೆ ಎಚ್ಚರಿಕೆ ಇರಲಿ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ಕಿಡಿಕಾರಿದರು.