ಮಂಡ್ಯ: ನಗರದಲ್ಲಿಂದ ಶಂಕಾಸ್ಪದ ಪ್ರಕರಣ ನಡೆದಿದೆ. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾಗಿದ್ದ ಅಲ್ತಾಫ್ ಮೆಹದಿ ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ಗುತ್ತಲು ಬಡವಾಣೆಯಲ್ಲಿ ನಡೆದಿದೆ.
ಅಲ್ತಾಫ್ ಮೆಹದಿ ರಾತ್ರಿ ಊಟ ಮುಗಿಸಿ ಮಲಗಿದ್ದರು. ಆದರೆ, ಮಧ್ಯರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ, ಮೃತದೇಹದ ಮೇಲಿದ್ದ ಗಾಯದ ಗುರುತುಗಳನ್ನು ನೋಡಿದ ಮೃತರ ಸಂಬಂಧಿಕರು, ಅಲ್ತಾಫ್ ಪತ್ನಿ ಸಯ್ಯದಾ ರಿಜ್ವಾನ್ ಬಾನು ತನ್ನ ಮಕ್ಕಳೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಸದ್ಯ ಮಂಡ್ಯದ ಪೂರ್ವ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂಲತಃ ಚನ್ನಪಟ್ಟಣದವರಾದ ಮೃತ ಅಲ್ತಾಫ್ ಮೆಹದಿ ಮಂಡ್ಯ ತಾಲೂಕಿನ ತಗ್ಗಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಯಾರೋ ಆ ರೋಹಿಣಿ ಸಿಂಧೂರಿ... ಆವಮ್ಮ ಹೇಳಿದಂತೆ ಕೇಳಬೇಕಾ?: ಸಿದ್ದರಾಮಯ್ಯ ಕಿಡಿ