ETV Bharat / state

ಮಂಡ್ಯ ಉರೀಗೌಡ, ನಂಜೇಗೌಡ ಮತ್ತು ಅಂಬರೀಶ್ ಹುಟ್ಟಿದ ನಾಡು..​ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚುನಾವಣಾ ಪ್ರಚಾರ

''ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲಿ ಅನೇಕ ಭ್ರಷ್ಟಾಚಾರ ಮತ್ತು ಹಗರಣಗಳು ಆಗಿದ್ದವು. ಆದರೆ, ಈಗಿನ ನಮ್ಮ ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ'' ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

Union Minister Rajnath Singh
ಕೇಂದ್ರ ಸಚಿವ ರಾಜನಾಥ್ ಸಿಂಗ್
author img

By

Published : Apr 29, 2023, 11:07 PM IST

ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಾತನಾಡಿದರು.

ಮಂಡ್ಯ: ಜಿಲ್ಲೆಯ ಚುನಾವಣಾ ಅಖಾಡದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಬ್ಬರದ ಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಯೋಗಿ ನಂತರ, ಮಂಡ್ಯಕ್ಕೆ ಆಗಮಿಸಿದ ರಾಜನಾಥ್ ಸಿಂಗ್ ಬಿರುಸಿನ ಪ್ರಚಾರ ನಡೆಸಿದರು.

ಉರೀಗೌಡ, ನಂಜೇಗೌಡ ಹೆಸರು ಪ್ರಸ್ತಾಪ ಮಾಡಿದ ರಾಜನಾಥ್ ಸಿಂಗ್: ಮಂಡ್ಯದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಚ್ಚಿದಾನಂದ ಪರ ರಾಜನಾಥ್ ಸಿಂಗ್ ಮತಯಾಚನೆ ಮಾಡಿದ್ರು. ಶ್ರೀರಂಗಪಟ್ಟಣ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ''ಈ ಭೂಮಿ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಉರೀಗೌಡ, ನಂಜೇಗೌಡ ಹಾಗೂ ಅಂಬರೀಶ್ ಹುಟ್ಟಿದ ನಾಡು'' ಎಂದ ಅವರು, ''ಈ ಬಾರಿ ಅತಂತ್ರ ಸ್ಥಿತಿಯ ಸರ್ಕಾರ ನಿರ್ಮಾಣಕ್ಕೆ ಅವಕಾಶ ನೀಡಬಾರದು.

ಪ್ರಧಾನಿ ಮೋದಿಯ ಅಭಿವೃದ್ಧಿ ನೋಡಿ ಈ ಬಾರಿ ಬಿಜೆಪಿಗೆ ಮತ ನೀಡಿ. ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲಿ ಅನೇಕ ಭ್ರಷ್ಟಾಚಾರ ಮತ್ತು ಹಗರಣಗಳು ಆಗಿದ್ದವು. ಆದರೆ, ಈಗಿನ ನಮ್ಮ ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ. ಭ್ರಷ್ಟಾಚಾರ ರಹಿತ ಸರ್ಕಾರ ನೋಡಿದ್ದೀರಿ, ಅಭಿವೃದ್ಧಿ ನೋಡಿದ್ದೀರಿ. ಈ ಬಾರಿ ಪೂರ್ಣಬಹುತದ ಸರ್ಕಾರ ಕೊಡಿ, ಭ್ರಷ್ಟಾಚಾರ ಕಡಿವಾಣ ಹಾಕುತ್ತೇವೆ'' ಎಂದು ಹೇಳಿದರು.

''ರಾಜ್ಯದಲ್ಲಿ ಅಧಿಕಾರ ಸಿಗಲ್ಲ ಎಂಬುದು ಕಾಂಗ್ರೆಸ್​ನವರಿಗೆ ಈಗಾಗಲೇ ಗೊತ್ತಾಗಿದೆ. ಈಗ ಧರ್ಮದ ಆಧಾರದ ಮೇಲೆ ಒಡೆಯುವ ಕೆಲಸ ಮಾಡ್ತಿದ್ದಾರೆ‌. ಈಗ ಯಾವ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡ್ತಾರೆ ಅವರು. ನಾವು ಸಂವಿಧಾನದ ಆಶಯದ ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದೇವೆ. ನಾವು ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ರೆ, ಇವರು ಬೇರ್ಪಡಿಸುವ ಕೆಲಸ ಮಾಡ್ತಿದ್ದಾರೆ'' ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮೋದಿ ಮೋಡಿ : ರೋಡ್ ಶೋ ವೇಳೆ ನಮೋಗೆ ಹೂವಿನ ಸುರಿಮಳೆ

ಕಾಂಗ್ರೆಸ್​ ವಿರುದ್ಧ ಆರ್. ಅಶೋಕ್ ಗರಂ: ಸಚಿವ ಆರ್.ಅಶೋಕ್ ಮಾತನಾಡಿ, ''ಕಾಂಗ್ರೆಸ್‌, ಜೆಡಿಎಸ್‌ ಇರಬೇಕಾ ಎಂದು ಚಿಂತನೆ ಮಾಡಬೇಕಾದ ಚುನಾವಣೆ ಇದು. ಇಡೀ ದೇಶದಲ್ಲಿ ಕಾಂಗ್ರೆಸ್‌ ಕಾಣೆಯಾಗುತ್ತಿದೆ. ಮೋದಿ ಬಡವರ ಪ್ರಧಾನಿಯಾಗಿ ಕೆಲಸ ಮಾಡ್ತಿದ್ದಾರೆ. ಬಡವರ ಪರವಾಗಿ ಉತ್ತಮ ಕೆಲಸ ಮಾಡ್ತಿದ್ದಾರೆ'' ಎಂದ ಅವರು, ಇವಾಗ ಡಿಕೆಶಿ ಉಚಿತ ವಿದ್ಯುತ್ ಕೊಡ್ತೀನಿ ಅಂತಾರೆ. ಇಂಧನ ಖಾತೆ ಸಚಿವರಾಗಿದ್ದಾಗ ಯಾಕೆ ಉಚಿತ ವಿದ್ಯುತ್ ಕೊಡಲಿಲ್ಲ. ರಾಹುಲ್ ಗಾಂಧಿಯನ್ನ ಕರೆಸಿ ಅದನ್ನ ಅನೌನ್ಸ್ ಮಾಡಿಸ್ತಾರೆ. ಪಾಪ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿ ಸುಸ್ತಾಗಿದ್ದರು. ಸಿದ್ದರಾಮಯ್ಯ ಇವಾಗ ದೇವಸ್ಥಾನಕ್ಕೆ ಹೋಗ್ತಿದ್ದಾರೆ. ಹಿಂದೆ ಅವರಿಗೆ ದೇವಸ್ಥಾನದ ಕುಂಕುಮ ಅಂದ್ರೆ ಆಗುತ್ತಿರಲಿಲ್ಲ. ಇವರು ಇವಾಗ ಅಧಿಕಾರಕ್ಕೆ ಬರ್ತಾರಂತೆ. ಇವರ ನಡುವಿನ ಕಿತ್ತಾಟ ಇನ್ನೂ ಶಮನವಾಗಿಲ್ಲ ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ: ಮತ ಚಲಾವಣೆಗೂ ಮುನ್ನ 8 ಮಂದಿ ನಿಧನ.. ಚಾಮರಾಜನಗರದಲ್ಲಿ 313 ಮಂದಿಯಿಂದ ಮನೆಯಲ್ಲೇ ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.