ETV Bharat / state

ವಿದ್ಯುತ್ ಸಂಪರ್ಕ ಕಲ್ಪಿಸುವಾಗ ತಂತಿ ಸ್ಪರ್ಶಿಸಿ ಕಂಟ್ರಾಕ್ಟರ್ ಸೇರಿ ಇಬ್ಬರ ಸಾವು

ಶ್ರೀರಂಗಪಟ್ಟಣ ತಾಲೂಕಿನಲ್ಲಿ ರಸ್ತೆಯ ಪಕ್ಕದ ಕಂಬದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ.

two-people-including-a-contractor-died-due-to-electric-shock-in-mandya
ವಿದ್ಯುತ್ ಸಂಪರ್ಕ ಕಲ್ಪಿಸುವಾಗ ತಂತಿ ಸ್ಪರ್ಶಿಸಿ ಕಂಟ್ರಾಕ್ಟರ್ ಸೇರಿ ಇಬ್ಬರ ಸಾವು
author img

By

Published : Jul 9, 2022, 9:52 PM IST

ಶ್ರೀರಂಗಪಟ್ಟಣ (ಮಂಡ್ಯ): ತಾಲೂಕಿನ ಕೆಆರ್​​ಎಸ್ ಬಳಿ ಖಾಸಗಿ ಕಂಪನಿಯ ಬೋರ್​​ವೆಲ್​ ಪ್ಲಾಂಟ್​ಗೆ ವಿದ್ಯುತ್ ಸಂಪರ್ಕ ಕೊಡುವ ವೇಳೆ ಕಂಬದಿಂದ ವಿದ್ಯುತ್ ತಗುಲಿ ಕಂಟ್ರಾಕ್ಟರ್ ಸೇರಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿದ್ಯುತ್ ಸಂಪರ್ಕ ಕಲ್ಪಿಸುವಾಗ ತಂತಿ ಸ್ಪರ್ಶಿಸಿ ಕಂಟ್ರಾಕ್ಟರ್ ಸೇರಿ ಇಬ್ಬರ ಸಾವು
ವಿದ್ಯುತ್ ಸಂಪರ್ಕ ಕಲ್ಪಿಸುವಾಗ ತಂತಿ ಸ್ಪರ್ಶಿಸಿ ಕಂಟ್ರಾಕ್ಟರ್ ಸೇರಿ ಇಬ್ಬರ ಸಾವು

ಕಂಟ್ರಾಕ್ಟರ್ ಉಮೇಶ್ (35) ಮತ್ತು ಕಾರ್ಮಿಕ ಶಂಕರಾಚಾರಿ (55) ಎಂಬುವವರೇ ಮೃತ ದುರ್ದೈವಿಗಳು. ರಸ್ತೆಯ ಪಕ್ಕದ ಕಂಬದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ವಿದ್ಯುತ್ ತಂತಿ ತಗುಲಿ ಈ ದುರಂತ ಸಂಭವಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ಕೆಆರ್​ಎಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತ, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೇ, ಸಾರ್ವಜನಿಕರು ಕೂಡ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಈ ಅವಘಡಕ್ಕೆ ನಿಜವಾದ ಕಾರಣವೇನು ಎಂದು ಪತ್ತೆ ಹೆಚ್ಚಬೇಕು. ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡುವಂತೆ ಸಂಬಂಧಿಕರು ಆಗ್ರಹಿಸಿದರು.

ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಕೆಲಸ ಕಳೆದುಕೊಂಡ ಇಂಜಿನಿಯರ್: ನಕಲಿ ನೋಟುಗಳ ಮುದ್ರಣದ ಮೊರೆ ಹೋದ..! ಬಳಿಕ ಮಾಡಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.