ETV Bharat / bharat

ಕುರ್ಲಾ ಸಾರಿಗೆ ಬಸ್​ ಅಪಘಾತ: ಬ್ರೇಕ್​ ಬದಲು ಕ್ಲಚ್​ ಒತ್ತಿದ್ದರಿಂದ ಸಂಭವಿಸಿತಾ ದೊಡ್ಡ ಅನಾಹುತ?

ಎಲೆಕ್ಟ್ರಾನಿಕ್​ ಆಟೋಮೆಟಿಕ್​ ಭಾರಿ ವಾಹನ ಚಾಲನೆ ಅನುಭವ ಇಲ್ಲದ ಸಂಜಯ್, ವಾಹನ ನಿಯಂತ್ರಿಸಲು​ ಬ್ರೇಕ್​ ಬದಲಾಗಿ ಕ್ಲಚ್​ ಒತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ.

kurla-bus-accident-driver-pressed-accelerator-instead-of-brake
ಬಸ್​ ಅಪಘಾತ (ETV Bharat)
author img

By ETV Bharat Karnataka Team

Published : 2 hours ago

Updated : 2 hours ago

ಮುಂಬೈ, ಮಹಾರಾಷ್ಟ್ರ: ಇಲ್ಲಿನ ಕುರ್ಲಾದಲ್ಲಿ ನಡೆದ ಭೀಕರ​ ಸಾರಿಗೆ ಬಸ್​ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದರು. ಈ ಅಪಘಾತಕ್ಕೆ ಸಂಬಂಧಪಟ್ಟಂತೆ ತನಿಖೆ ಬಿರುಸಿನಿಂದ ಸಾಗುತ್ತಿದೆ. ಈ ನಡುವೆ ಪ್ರಕರಣದ ಆರೋಪಿ ಸಂಜಯ್​ನನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದು, ಈ ಅಪಘಾತಕ್ಕೆ ಕಾರಣ ಏನು ಎಂಬುದರ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

ಬ್ರೇಕ್​ ಬದಲು ಕ್ಲಚ್​: ಎಲೆಕ್ಟ್ರಾನಿಕ್​ ಆಟೋಮೆಟಿಕ್​ ವಾಹನ ಚಾಲನೆ ಅನುಭವ ಇಲ್ಲದ ಚಾಲಕ ಸಂಜಯ್, ವಾಹನ ನಿಯಂತ್ರಿಸಲು​ ಬ್ರೇಕ್​ ಬದಲಾಗಿ ಕ್ಲಚ್​ ಒತ್ತಿದ್ದೇ ಈ ಅನಾಹುತಕ್ಕೆ ಕಾರಣ ಎಂಬ ವಿಚಾರ ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ.

ಸಂಜಯ್​ ಈ ಮುಂಚೆ ಮಿನಿ ಬಸ್​​ ಚಾಲನೆ ಮಾಡುತ್ತಿದ್ದ. ಈ ಬಸ್​ನಲ್ಲಿ ಕ್ಲಚ್​, ಬ್ರೇಕ್​ ಮತ್ತು ಆಕ್ಸಿಲೇಟರ್​ ವ್ಯವಸ್ಥೆ ಇತ್ತು. ಇದೇ ವಾಹನದಲ್ಲಿ ಈತ 10 ದಿನ ತರಬೇತಿ ಕೂಡಾ ಪಡೆದುಕೊಂಡಿದ್ದ. ಇದಾದ ಬಳಿಕ ಆತನಿಗೆ ನೇರವಾಗಿ ದೊಡ್ಡ ಬಸ್​ ಚಾಲನೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದೇ ಈಗ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಂಜಯ್​ ಬೆಸ್ಟ್​ (ಮಹಾರಾಷ್ಟ್ರ ಸಾರಿಗೆ) ನಲ್ಲಿ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ವಾಹನಗಳು ಡಿಸೇಲ್​ ಮತ್ತು ಪೆಟ್ರೋಲ್​ ವಾಹನಳಾಗಿದ್ದವು ಎಂಬುದು ಗಮನಾರ್ಹ. ಅಲ್ಲದೇ, ಇವೆಲ್ಲ ಮಿನಿ ವಾಹನಗಳಾಗಿದ್ದವು. ಇವುಗಳು ಕ್ಲಚ್​, ಗೇರ್​ ಮುಂತಾದ ಇನ್​​ಸ್ಟ್ರುಮೆಂಟ್​​ಗಳನ್ನು ಹೊಂದಿದ್ದವು. ಆದರೆ ಆತ ಎಂದಿಗೂ ಸ್ವಯಂಚಾಲಿತ ವಾಹನವನ್ನು ಓಡಿಸಿ ಅನುಭವ ಹೊಂದಿರಲಿಲ್ಲ. ಹೀಗಾಗಿಯೇ ಪ್ರಮಾದ ಜರುಗಿದ್ದು, ದೊಡ್ಡ ಅನಾಹುತಕ್ಕೆ ಕಾರಣವಾಗಿದೆ.

ಆಟೋಮೆಟಿಕ್​ ವಾಹನ ಚಾಲನೆ ಅನುಭವ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ?: ಅಲ್ಲದೇ ಆರೋಪಿ, ಕೇವಲ 10 ದಿನಗಳ ತರಬೇತಿ ಪಡೆದಿದ್ದ. ಹೀಗಾಗಿ ಆತನಿಗೆ ಎಲೆಕ್ಟ್ರಾನಿಕ್​ ಆಟೋಮೆಟಿಕ್​ ವಾಹನ ಚಾಲನೆ ಬಗ್ಗೆ ಸಂಪೂರ್ಣವಾಗಿ ಜ್ಞಾನ ಲಭಿಸಿರಲಿಲ್ಲ. ಅಷ್ಟೇ ಅಲ್ಲ ಈ ಅಲ್ಪ ತರಬೇತಿ ಬಳಿಕ ಸಂಜಯ್​​​​​ನಿಗೆ ದೊಡ್ಡ ವಾಹನ ಓಡಿಸುವ ಜವಾಬ್ದಾರಿ ನೀಡಲಾಗಿದೆ. ಇನ್ನು ವಾಹನಗಳಿಂದ ತುಂಬಿದ್ದ ರಸ್ತೆಯಲ್ಲಿ ಬಸ್​​ ನಿಲ್ಲಿಸುವ ವೇಳೆ ಆತ ಬ್ರೇಕ್​ ಬದಲಿಗೆ ಕ್ಲಚ್​ ಒತ್ತಿದ್ದು, ಭಾರಿ ಅನಾಹುತ ನಡೆಯಲು ಕಾರಣವಾಗಿದೆ. ಬ್ರೇಕ್​ ಎಂದು ಭಾವಿಸಿ ಕ್ಲಚ್​ ಜೋರಾಗಿ ಒತ್ತಿದ ಪರಿಣಾಮ ಬಸ್​​ ವೇಗವಾಗಿ ಸಾಗಿದ್ದು, ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಅಪಘಾತದ ಕುರಿತು ತನಿಖೆಗಾಗಿ ಬೆಸ್ಟ್​ ಸಾರಿಗೆ ಇಲಾಖೆಯ ಇಂಜಿನಿಯರಿಂಗ್​ ವಿಭಾಗದಿಂದ ತನಿಖಾ ತಂಡ ರಚಿಸಲಾಗಿದೆ. ಅಪಘಾತಕ್ಕೆ ಕಾರಣವಾಗಿರುವ ಚಾಲಕನನ್ನು ಡಿಸೆಂಬರ್​ ​ 21ರವರೆಗೆ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ವಿವಾದ ಎಬ್ಬಿಸಿದ ಅಲಹಾಬಾದ್​ ಹೈಕೋರ್ಟ್​ ಜಡ್ಜ್​​ ಹೇಳಿಕೆ: ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್​

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.