ಮಂಡ್ಯ: ಇಂದು ಪಿತೃಪಕ್ಷದ ಮಹಾಲಯ ಅಮಾವಾಸ್ಯೆಯಾದ ಹಿನ್ನೆಲೆ ರಾಜ್ಯದ ವಿವಿಧ ಮೂಲಗಳಿಂದ ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡಕ್ಕೆ ಆಗಮಿಸಿದ ಸಾವಿರಾರು ಮಂದಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾರೆ.
ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಆಸ್ತಿಕರ ಜನ ಜಾತ್ರೆ ನಡೆಯುತ್ತದೆ. ಈ ಹಿನ್ನೆಲೆ ಕಾವೇರಿ ನದಿ ತಟದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ತಮ್ಮ ಕುಟುಂಬದ ಹಿರಿಯರಿಗೆ ಪಶ್ಚಿಮವಾಹಿನಿ, ಸ್ನಾನಘಟ್ಟ, ಗೋಸಾಯಿಘಾಟ್ ಹಾಗೂ ಸಂಗಮದಲ್ಲಿ ಪಿಂಡ ತರ್ಪಣ ಮಾಡಲಾಗುತ್ತಿದೆ.
ಪಿತೃಪಕ್ಷದಲ್ಲಿ ತಿಲತರ್ಪಣ ಅರ್ಪಿಸಿಸುವುದರಿಂದ ಪೂರ್ವಜನರ ಆತ್ಮಕ್ಕೆ ಶಾಂತಿ ಮತ್ತು ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಶಿವಮೊಗ್ಗ: ಮಹಾಲಯ ಅಮವಾಸ್ಯೆ, ಪಿಂಡ ಪ್ರದಾನಕ್ಕೆ ಜನರ ನೂಕುನುಗ್ಗಲು