ETV Bharat / state

ಮಂಡ್ಯದಲ್ಲಿಂದು ಶಾಸಕರ ಜೊತೆ ಸಭೆ ನಡೆಸಲಿರುವ ಸಚಿವ ನಾರಾಯಣಗೌಡ

author img

By

Published : May 7, 2021, 7:51 AM IST

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಇಂದು ಸಂಜೆ ಶಾಸಕರ ಜೊತೆ ಸಭೆ ನಡೆಸುವುದಾಗಿ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

Today mlas meeting held, Today mlas meeting held by Minister Narayana Gowda, Minister Narayana Gowda, Minister Narayana Gowda news, ಇಂದು ಸಂಜೆ ಶಾಸಕರ ಜೊತೆ ಸಭೆ ನಡೆಸಲಿರುವ ಸಚಿವ ನಾರಾಯಣಗೌಡ, ಮಂಡ್ಯದಲ್ಲಿ ಇಂದು ಸಂಜೆ ಶಾಸಕರ ಜೊತೆ ಸಭೆ ನಡೆಸಲಿರುವ ಸಚಿವ ನಾರಾಯಣಗೌಡ, ಸಚಿವ ನಾರಾಯಣಗೌಡ, ಸಚಿವ ನಾರಾಯಣಗೌಡ ಸುದ್ದಿ,
ಮಂಡ್ಯದಲ್ಲಿ ಇಂದು ಸಂಜೆ ಶಾಸಕರ ಜೊತೆ ಸಭೆ ನಡೆಸಲಿರುವ ಸಚಿವ

ಮಂಡ್ಯ: ಕಳೆದ ಬಾರಿ ಪೂರ್ಣ ಲಾಕ್‌ಡೌನ್ ಮಾಡಿದಾಗ ಹಲವು ಆರೋಪಗಳು ಬಂದಿದ್ದು, ಈ ಬಾರಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ ಎಂದು ಮಂಡ್ಯದಲ್ಲಿ ಸಚಿವ ನಾರಾಯಣಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡುತ್ತಿರುವುದು ನಮ್ಮ ಕಣ್ಣಿಗೂ ಕಾಣಿಸುತ್ತಿದೆ. ಹೀಗಾಗಿ ಸಂಪೂರ್ಣ ಲಾಕ್‌ಡೌನ್ ಮಾಡೋದು ಒಳ್ಳೆಯದಾ? ಅಥವಾ ಇದೇ ರೀತಿ ಮುಂದುವರಿಸಬೇಕಾ? ಎಂಬುದರ ಬಗ್ಗೆ ಸಲಹೆ ಕೇಳ್ತಿದ್ದೀವಿ ಎಂದರು.

ಸಚಿವ ನಾರಾಯಣ ಗೌಡ

ಮಂಡ್ಯದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಇಂದು ಸಭೆ ನಡೆಯಲಿದ್ದು, ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ಸರ್ಕಾರದ ಗಮನಕ್ಕೆ ತಂದು ತೀರ್ಮಾನ ಮಾಡಲಾಗುವುದು. ಜೆಡಿಎಸ್ ಶಾಸಕರು ಹೆಚ್ಚು ಇರೋದ್ರಿಂದ ಅವರ ಸಹಕಾರವೂ ಅಗತ್ಯ ಎಂದು ತಿಳಿಸಿದರು.

ಕೆಲವು ತೀರ್ಮಾನ ತೆಗೆದುಕೊಳ್ಳಲು ಉಸ್ತುವಾರಿ ಸಚಿವರಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಗೊಂದಲಕ್ಕೆ ಕಾರಣವಾಗಬಾರದೆಂದು ಶಾಸಕರ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ಆದಿಚುಂಚನಗಿರಿ ಮಠದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.

ಕಾಲೇಜ್​ಗೆ ಭೇಟಿ

ಇದಕ್ಕೂ ಮುನ್ನ ಮಂಡ್ಯ ಪಿಇಎಸ್ ಕಾಲೇಜಿನ ವಸತಿ ನಿಲಯಗಳಿಗೆ ಸಚಿವ ಕೆ.ಸಿ. ನಾರಾಯಣಗೌಡ ಭೇಟಿ ನೀಡಿ ಪರಿಶೀಲನೆ ‌ನಡೆಸಿದರು.

ಕೋವಿಡ್ ಸೆಂಟರ್ ಆಗಿ ಪರಿವರ್ತಿಸುವ ಬಗ್ಗೆ ಪರಿಶೀಲನೆ ನಡೆಸಿದ ಅವರು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್​ನಲ್ಲಿ ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಮೊದಲ ಹಂತವಾಗಿ ಪಿಇಎಸ್ ಇಂಜನಿಯರಿಂಗ್ ಕಾಲೇಜಿನ ಹಾಸ್ಟೆಲ್ ಪರಿಶೀಲನೆ ನಡೆಸಿದ್ದೇನೆ. ಬಾಯ್ಸ್, ಗರ್ಲ್ಸ್ ಹಾಸ್ಟೆಲ್​ನಿಂದ 1500 ಸೋಂಕಿತರನ್ನು ಕ್ವಾರಂಟೈನ್ ಮಾಡಲು ಚಿಂತನೆ ಮಾಡಲಾಗಿದೆ. ಈ ಕುರಿತ ಕಾಲೇಜಿನ ಅಧ್ಯಕ್ಷ ವಿಜಯಾನಂದ ಜೊತೆ ಕೆಲ ಕಾಲ ಚರ್ಚೆ ಮಾಡಿದ್ದೇನೆ. ಅವರು ಕೂಡ ಇದಕ್ಕೆ ಒಪ್ಪಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.