ETV Bharat / state

ಮೈಸೂರು ದಸರಾ: ಗಜಪಡೆ ಕ್ಯಾಂಪ್​ನಲ್ಲಿ ಲಕ್ಷ್ಮೀ ಜೊತೆ ಭೀಮನ ತುಂಟಾಟ - DASARA ELEPHANTS PLAYING

author img

By ETV Bharat Karnataka Team

Published : 3 hours ago

Updated : 2 hours ago

ಎರಡು ಆನೆಗಳು ಒಂದಕ್ಕೆ ಒಂದು ಆಟವಾಡಿಕೊಂಡು ಜೋಡಿಯಾಗಿ ನಿಂತಿರುವುದು. ಭೀಮ ಆನೆಯು ತನ್ನ ಸೊಂಡಿಲನ್ನು ಲಕ್ಷ್ಮಿ ಆನೆಯ ಭುಜದ ಮೇಲೆ ಹಾಕಿ ತನ್ನತ್ತ ಎಳೆದುಕೊಂಡು ಅದರ ಹೊಟ್ಟೆ ಮೇಲೆ ಸೊಂಡಿಲಿಟ್ಟು ಮಲಗುವ ದೃಶ್ಯ ನೋಡುಗರನ್ನು ಆಕರ್ಷಿಸುತ್ತಿದೆ.

Elephants are playing
ಆನೆಗಳ ತುಂಟಾಟ (ETV Bharat)

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸಲು ವಿವಿಧ ಆನೆ ಶಿಬಿರಗಳಿಂದ ಅರಮನೆಗೆ ಆಗಮಿಸಿರುವ ಗಜಪಡೆ, ಅರಮನೆಯ ತಾತ್ಕಾಲಿಕ ಶೆಡ್​ನಲ್ಲಿ ವಾಸ್ತವ್ಯ ಹೂಡಿವೆ. ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ನಿಶಾನೆ ಆನೆಯಾಗಿ ಆಯ್ಕೆಯಾಗಿರುವ ಭೀಮ, ರಾಂಪುರ ಆನೆ ಶಿಬಿರದಿಂದ ಆಗಮಿಸಿರುವ ಲಕ್ಷ್ಮೀ ಆನೆ ಜತೆ ತುಂಟಾಟದಲ್ಲಿ ತೊಡಗಿದೆ. ಇದರ ಅಪರೂಪದ ವಿಡಿಯೋ ಇಲ್ಲಿದೆ.

ದಸರಾ ಗಜಪಡೆಯ ಈ ವರ್ಷದ ಪ್ರಮುಖ ಆಕರ್ಷಣೆ ಎಂದರೆ ಭೀಮ. ಅಕಾಲಿಕ ಮರಣವನ್ನಪ್ಪಿದ ಅರ್ಜನನ ಸ್ಥಾನವನ್ನು ಈ ಬಾರಿಯ ದಸರಾ ಮಹೋತ್ಸವದಲ್ಲಿ ಭೀಮ ತುಂಬುತ್ತಾನೆ ಎಂಬ ವಿ‍ಶ್ವಾಸ ಮೂಡಿಸಿದ್ದಾನೆ. ತಾಲೀಮು ಮುಗಿಸಿದ ನಂತರ ಗಂಡು ಆನೆಗಳು, ಹೆಣ್ಣು ಆನೆಗಳೊಂದಿಗೆ ತುಂಟಾದಲ್ಲಿ ತೊಡಗಿರುವ ದೃಶ್ಯ ನೋಡುಗರ ಗಮನ ಸೆಳೆಯುತ್ತಿದೆ.

ಆನೆಗಳ ತುಂಟಾಟ (ETV Bharat)

ಭೀಮ ಮತ್ತು ‌ಲಕ್ಷ್ಮಿ ಆನೆಗಳನ್ನು ಅಕ್ಕ ಪಕ್ಕದಲ್ಲೇ ಕಟ್ಟಿ ಹಾಕಲಾಗಿದ್ದು, ಭೀಮ ಆನೆಯು ಲಕ್ಷ್ಮಿ ಆನೆಯನ್ನು ತನ್ನ ಸೊಂಡಲಿನ ಸಹಾಯದಿಂದ ತಬ್ಬಿ‌ ನಿಂತಿರುವುದು ವಿಶೇಷವಾಗಿತ್ತು. ಅತ್ಯಂತ ಪ್ರೀತಿಯ ಮನೋಭಾವದಿಂದ ಎರಡು ಆನೆಗಳು ಒಂದಕ್ಕೊಂದು ಆಟವಾಡಿಕೊಂಡು ಜೋಡಿಯಾಗಿ ನಿಂತಿರುವುದು. ಭೀಮ ಆನೆಯು ತನ್ನ ಸೊಂಡಿಲನ್ನು ಲಕ್ಷ್ಮಿ ಆನೆಯ ಭುಜದ ಮೇಲೆ ಹಾಕಿ ತನ್ನತ್ತ ಎಳೆದುಕೊಂಡು ಅದರ ಹೊಟ್ಟೆ ಮೇಲೆ ಸೊಂಡಿಲಿಟ್ಟು ಮಲಗುವ ದೃಶ್ಯ ನೋಡುಗರಿಗೆ ವಿಶೇಷವಾಗಿತ್ತು.

ಭೀಮ ಆನೆಯನ್ನು 2000ರಲ್ಲಿ ಭೀಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದಿದ್ದು, ಸದರಿ ಆನೆಯನ್ನು ಕಾಡಾನೆ ಮತ್ತು ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. 2017ನೇ ಸಾಲಿನ ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಹಾಗೂ 2022 ರಿಂದ ಪಟ್ಟದಾನೆಯಾಗಿ ಪಾಲ್ಗೊಂಡಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 4,945 ಕೆಜಿ ತೂಕವಿರುವ ಭೀಮ 2.85 ಮೀಟರ್​ ಎತ್ತರವಿದ್ದಾನೆ.

ತಾಯಿ ಆನೆಯಿಂದ ಬೇರ್ಪಟ್ಟ ಲಕ್ಷ್ಮಿ ಆನೆ 2002ರಲ್ಲಿ ದೊರಕಿದ್ದು, ಇಲಾಖೆಯ ಆನೆ ಶಿಬಿರದಲ್ಲಿ ಆರೈಕೆ ಮಾಡಲಾಗಿದೆ. ಕಳೆದ 3 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 2,480 ಕೆಜಿ ತೂಕವಿರುವ ಲಕ್ಷ್ಮೀ 2.32 ಮೀ. ಎತ್ತರವಿದ್ದಾಳೆ.

ಇದನ್ನೂ ಓದಿ: ದಸರಾ: ಬೈಕ್ ಸವಾರಿ, ಟಾಂಗಾ ಸವಾರಿ, ಪಾರಂಪರಿಕ ನಡಿಗೆಗೆ ಸೆ.30ರೊಳಗೆ ಹೆಸರು ನೋಂದಾಯಿಸಿ - Mysuru Dasara 2024

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.