ಮಂಡ್ಯ : ಮದ್ದೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಹೆಚ್ ಡಿ ಕೋಟೆ ತಾಲೂಕಿನ ಭೀಮನಹಳ್ಳಿಯ ಶರತ್ (25), ಬಸವರಾಜು (49) ಹಾಗೂ ಕೊಡಗು ಜಿಲ್ಲೆ ಪೊನ್ನಂಪೇಟೆ ನಿವಾಸಿ ಫಯಾಜ್ (31) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ನಾಗರಹೊಳೆ ಅರಣ್ಯದಿಂದ ಹುಲಿ ಉಗುರು ತಂದಿದ್ದಾರೆ. ಅದನ್ನು ಪರಿಚಯಸ್ತ ವರ್ತಕರನ್ನು ಪಟ್ಟಣಕ್ಕೆ ಕರೆಸಿ ಮಾರಾಟಕ್ಕೆ ಯತ್ನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು, ರೈಲು ನಿಲ್ದಾಣದ ಬಳಿ ಆರೋಪಿಗಳನ್ನ ಬಂಧಿಸಿದ್ದಾರೆ. ಹುಲಿ ಉಗುರು ಮಾರಾಟಕ್ಕೆ ಕೊಟ್ಟಿದ್ದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಓದಿ: ಹುಲಿಯ ಉಗುರು ಮಾರಾಟಕ್ಕೆ ಯತ್ನ.. ಏಳು ಮಂದಿ ಆರೋಪಿಗಳ ಬಂಧನ
ಬಂಧಿತರು ಇಂಥ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಆರೋಪಿಗಳಿಂದ ಸುಮಾರು 15 ಹುಲಿ ಉಗುರು ವಶ ಪಡಿಸಿಕೊಂಡಿದ್ದೇವೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿಚಾರಣೆ ನಡೆಯುತ್ತಿದೆ. ತಲೆಮರೆಸಿಕೊಂಡಿದ್ದ ಆರೋಪಿಗೆ ಶೋಧ ಕಾರ್ಯಾಚರಣೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.