ETV Bharat / state

ಮಂಡ್ಯದಲ್ಲಿ ಸರಗಳ್ಳರ ಗ್ಯಾಂಗ್​ ಬಂಧನ - ಸರಗಳ್ಳರ ವಿರುದ್ಧ ಮಂಡ್ಯ ಪೊಲೀಸರ ಕಾರ್ಯಾಚರಣೆ

ಮಹಿಳೆಯರ ಸರಗಳನ್ನು ಕಿತ್ತುಕೊಂಡು ಪರಾರಿಯಾಗ್ತಿದ್ದ ಆರೋಪಿಗಳ ಗ್ಯಾಂಗ್​ ಅನ್ನು ಮಂಡ್ಯದ ಕೆ. ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ.

thieves gang arrested in mandya
ಪೊಲೀಸರಿಂದ ಮಾಹಿತಿ
author img

By

Published : Mar 23, 2021, 7:52 AM IST

Updated : Mar 23, 2021, 9:03 AM IST

ಮಂಡ್ಯ: ಮಹಿಳೆಯರ ಕತ್ತಿನಿಂದ ಸರ ಕಸಿದು‌ ಪರಾರಿಯಾಗ್ತಿದ್ದ ತಂಡವನ್ನು ಜಿಲ್ಲೆಯ ಕೆ.ಎಂ.ದೊಡ್ಡಿ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರಿಂದ ಮಾಹಿತಿ
ಮದ್ದೂರು‌ ಪಟ್ಟಣದ ರೂಹಿದ್ ಪಾಷಾ, ಅಶುಪಾಷಾ, ಇಮ್ರಾನ್ ಖಾನ್,ಮತೀನ್ವುಲ್ಲಾ ಖಾನ್, ನೂರ್ ಅಹಮದ್ ಬಂಧಿತ ಆರೋಪಿಗಳು.
ಈ ಐದು ಮಂದಿ ಸರಗಳ್ಳರ ಗ್ಯಾಂಗ್,‌ ಕಳವು ಮಾಡಿದ್ದ ಸರಗಳನ್ನು ಮಾರಾಟ ಮಾಡಿ ಬಂದಿದ್ದ 3.55 ಲಕ್ಷ ರೂ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಎಂ. ಅಶ್ವಿನಿ ತಿಳಿಸಿದರು. ಬಂಧಿತ ಸರಗಳ್ಳರು ವಿವಿಧೆಡೆ ಹಲವು ಪ್ರಕರಣಗಳಲ್ಲಿ 250 ಗ್ರಾಂ ಚಿನ್ನದ ಸರಗಳನ್ನು ಕದ್ದು ಮಾರಾಟ ಮಾಡುವ ವೇಳೆ ಸಿಕ್ಕಿಹಾಕಿಕೊಂಡಿದ್ದು. ಬಂಧಿತರ ವಿಚಾರಣೆ ವೇಳೆ ಜಿಲ್ಲೆಯಲ್ಲಿ ನಡೆದ 14 ಪ್ರಕರಣದಲ್ಲಿ ಭಾಗಿಯಾಗಿರೋ ಬಗ್ಗೆ ತಿಳಿಸಿದ್ದಾರೆ ಎಂದರು.
ಇನ್ನು ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್ ಸೇರಿ ಒಟ್ಟು 13 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮದ್ದೂರಿನ‌ ಕೆ.ಎಂ.ದೊಡ್ಡಿ ಪೊಲೀಸರ ಕಾರ್ಯಾಕ್ಕೆ ಎಸ್ಪಿ ಅಶ್ವಿನಿ ಪ್ರಶಂಸೆ ವ್ಯಕ್ತಪಡಿಸಿ ವಿಶೇಷ ಬಹುಮಾನ ನೀಡುವುದಾಗಿ ತಿಳಿಸಿದರು‌. ಜಿಲ್ಲೆಯಲ್ಲಿ ಹೆಚ್ಚಾದ ಸರಗಳ್ಳತನ‌ ಪ್ರಕರಣದಿಂದ ಎಚ್ಚೆತ್ತ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಬಂಧಿಸುವುದಾಗಿ ತಿಳಿಸಿದ ಅವರು, ಸಾರ್ವಜನಿಕರು ಯಾವುದೇ ರೀತಿಯ ತೊಂದರೆ, ಆದಲ್ಲಿ ಹಾಗೂ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಆರಕ್ಷಕ ಠಾಣೆಗಳಿಗೆ ತಿಳಿಸುವಂತೆ ಮನವಿ ಮಾಡಿದರು‌.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 10 ಮಂದಿ ದುರ್ಮರಣ

Last Updated : Mar 23, 2021, 9:03 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.