ETV Bharat / state

ಮಾಜಿ ಸಿಎಂ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ!! - ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಿನ್ನೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆದರೆ ಇದನ್ನೇ ದಾಳವಾಗಿ ಬಳಸಿಕೊಂಡ ಕಳ್ಳರು ಅಭಿಮಾನಿಗಳ ಜೇಬಿಗೆ ಕತ್ತರಿ ಪ್ರಯೋಗ ಮಾಡಿದ್ದಾರೆ.

mandya
ಮಂಡ್ಯ
author img

By

Published : Jan 11, 2021, 10:54 AM IST

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಿನ್ನೆ ಎಚ್.ಡಿ. ಕುಮಾರಸ್ವಾಮಿ ಅವರು ವಿವಿಧೆಡೆ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ನೇರಲಕೆರೆ ಗ್ರಾಮದ ಜೆಡಿಎಸ್‌ ಮುಖಂಡ ಚೌಡೇಗೌಡ ಅವರ ಸಹೋದರ ಬಸವರಾಜು ಅವರ ಜೇಬಿನಲ್ಲಿದ್ದ 40 ಸಾವಿರ ರೂ. ಹಣವನ್ನು ಎಗರಿಸಿದ್ದಾರೆ. ಹಳುವಾಡಿ ಗ್ರಾಮದ ಶಂಕರೇಗೌಡ ಅವರ ಜೇಬಿನಲ್ಲಿದ್ದ 10 ಸಾವಿರ ನಗದು ಕದ್ದಿದ್ದಾರೆ. ತಗ್ಗಹಳ್ಳಿ ಗ್ರಾಮದ ಕೃಷ್ಣ ಅವರ ಜೇಬಿನಿಂದ 10,740 ರೂ., ನೇರಲಕೆರೆ ಗ್ರಾಮದ ಮಹಾಲಿಂಗ ಎಂಬ ಯುವಕನ ಪ್ಯಾಂಟ್‌ ಜೇಬಿನಲ್ಲಿದ್ದ 4 ಸಾವಿರ ರೂ. ಹಣ ಹಾಗೂ 20 ಸಾವಿರ ರೂ ಬೆಲೆಯ ಸ್ಯಾಮ್ಸಂಗ್ ಮೊಬೈಲ್ ಫೋನ್‌ನ್ನು ಲಪಟಾಯಿಸಿದ್ದಾರೆ.

ಇದನ್ನೂ ಓದಿ: ಸಿದ್ದು, ಎಚ್​ಡಿಕೆ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ; ಸಚಿವ ಈಶ್ವರಪ್ಪ

ಪ್ಯಾಂಟ್‌ನ ಹಿಂದಿನ ಜೇಬಿನಲ್ಲಿ ಹಣ ಇಟ್ಟಿದ್ದೆ, ಕುಮಾರಸ್ವಾಮಿ ಅವರ ಕೈ ಕುಲುಕಲು ಮುಂದೆ ಬಾಗಿ ವಾಪಸ್‌ ಬರುವಷ್ಟರಲ್ಲಿ ಹಣವನ್ನು ಅಪಹರಿಸಿದ್ದಾರೆ ಎಂದು ತಗ್ಗಹಳ್ಳಿಯ ಕೃಷ್ಣ ಎಂಬುವರು ಮಾಹಿತಿ ನೀಡಿದರು. ತುರ್ತು ಕೆಲಸಕ್ಕೆಂದು ಸ್ನೇಹಿತನ ಬಳಿ ಹಣ ಪಡೆದಿದ್ದೆ. ಅರ್ಧ ಗಂಟೆಯ ಒಳಗೆ ಹಣ ಕದ್ದಿದ್ದಾರೆ. ಜೇಬು ಕತ್ತರಿಸದೆ ಹಣ ಕದ್ದಿದ್ದಾರೆ ಎಂದು ಮಹಾಲಿಂಗು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.