ಮಂಡ್ಯ: ಮಹಿಳಾ ಅಧಿಕಾರಿಯೊಬ್ಬರು ರಾಜ್ಯ ಸರ್ಕಾರದ ವರ್ಗಾವಣೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮ ಪರವಾಗಿ ತೀರ್ಪು ಬಂದ ಹಿನ್ನಲೆಯಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಕಚೇರಿಯಲ್ಲಿ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ.
ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಎಂಬುವವರು ಕೋರ್ಟ್ ಮೊರೆ ಹೋಗಿದ್ದು, ಮೂಲ ಕಚೇರಿಯಲ್ಲಿ ನಿಯೋಜನೆಗೊಂಡ ಮತ್ತೆ ಅಧಿಕಾರಿಯಾಗಿದ್ದಾರೆ. ಕಳೆದ ತಿಂಗಳು ಶೈಲಜಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ 'ನಾನು ಪಾಂಡವಪುರ ಉಪವಿಭಾಗಕ್ಕೆ ಬಂದು ಎರಡು ವರ್ಷ ತುಂಬಿಲ್ಲ' ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರ ವಿಚಾರಣೆ ನಡೆಸಿದ ನ್ಯಾಯಾಲಯ ಮೂಲ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶ ನೀಡಿದೆ.
ಈ ಹಿಂದೆಯೂ ವರ್ಗಾವಣೆಯನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿ ಜಯಗಳಿಸಿ ಪಾಂಡವಪುರ ಉಪ ವಿಭಾಗದಲ್ಲೇ ಉಳಿದುಕೊಂಡಿದ್ದರು. ನಂತರ ಮತ್ತೆ ರಾಜ್ಯ ಸರ್ಕಾರ ಅವರನ್ನು ವರ್ಗಾವಣೆ ಮಾಡಿದ ಆದೇಶ ಹೊರಡಿಸಿತ್ತು. ಎರಡನೇ ಬಾರಿಯೂ ಹೈಕೋರ್ಟ್ ಮೊರೆ ಹೋಗಿದ್ದು, ಮೂಲ ಕಚೇರಿಯಲ್ಲಿ ಅಧಿಕಾರಿ ಆಗಿ ಮುಂದುವರಿದಿದ್ದಾರೆ. ಶೈಲಜಾ ಅವರಿಗೆ ಬಿಜೆಪಿಯ ಶಾಸಕ ಕೆ.ಸಿ. ನಾರಾಯಣಗೌಡ ಅವರು ಶುಭ ಕೋರಿದರು.