ETV Bharat / state

ಇದೇ ಫಸ್ಟ್ ಅಂಡ್​ ಲಾಸ್ಟ್​​.. ದಂಡ ಹಾಕಿದ್ದಕ್ಕೆ ಪೊಲೀಸರ ಮೇಲೆ ಸಿಟ್ಟಿಗೆದ್ದ ತಹಶೀಲ್ದಾರ್: ವಿಡಿಯೋ ವೈರಲ್​

ಎಸ್‌ಐ ರವಿಶಂಕರ್‌ ನೇತೃತ್ವದ ತಂಡ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ, ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರು ಹೆಲ್ಮೆಟ್​​​ ಹಾಕದೇ ಬೈಕ್‌ನಲ್ಲಿ ಬಂದಿದ್ದು, ಬೈಕ್ ಅನ್ನು ಅಡ್ಡಗಟ್ಟಿದ ಪೊಲೀಸರು ದಂಡ ಹಾಕಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಸಿ ಮತ್ತು ತಹಶೀಲ್ದಾರ್ ಇಬ್ಬರೂ ಎಸ್‌ಐಯನ್ನು ತರಾಟೆಗೆ ತೆಗೆದುಕೊಂಡರು

tahasildar-slams-police-officer-who-fined-revenue-employees
ದಂಡ ಹಾಕಿದ್ದಕ್ಕೆ ಪೊಲೀಸರ ಮೇಲೆ ಸಿಟ್ಟಿಗೆದ್ದ ತಹಶೀಲ್ದಾರ್
author img

By

Published : May 12, 2021, 8:12 PM IST

ಮಂಡ್ಯ: ಕಂದಾಯ ಇಲಾಖಾ ಸಿಬ್ಬಂದಿ ಹೆಲ್ಮೆಟ್ ಹಾಕದೇ ಬಂದಿದ್ದಕ್ಕೆ ದಂಡ ಹಾಕಿದ ಸಬ್‌ -ಇನ್ಸ್​​ಪೆಕ್ಟರ್​​ಗೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನಡು ರಸ್ತೆಯಲ್ಲೇ ಆವಾಜ್ ಹಾಕಿರುವ ಘಟನೆ ನಾಗಂಗಲದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಕಂದಾಯ ಇಲಾಖೆಯ ಯಾವ ಸಿಬ್ಬಂದಿಗೂ ದಂಡ ಹಾಕದಂತೆ ನಾಗಮಂಗಲ ಟೌನ್ ಪೊಲೀಸ್ ಠಾಣೆ ಎಸ್‌ಐ ರವಿಶಂಕರ್‌‌ಗೆ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್‌ ಅಹಮದ್ ವಾರ್ನಿಗ್ ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ದಂಡ ಹಾಕಿದ್ದಕ್ಕೆ ಪೊಲೀಸರ ಮೇಲೆ ಸಿಟ್ಟಿಗೆದ್ದ ತಹಶೀಲ್ದಾರ್

ಎಸ್‌ಐ ರವಿಶಂಕರ್‌ ನೇತೃತ್ವದ ತಂಡ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ, ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರು ಹೆಲ್ಮೆಟ್​​​ ಹಾಕದೇ ಬೈಕ್‌ನಲ್ಲಿ ಬಂದಿದ್ದು, ಬೈಕ್ ಅನ್ನು ಅಡ್ಡಗಟ್ಟಿದ ಪೊಲೀಸರು ದಂಡ ಹಾಕಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಸಿ ಮತ್ತು ತಹಶೀಲ್ದಾರ್ ಇಬ್ಬರೂ ಎಸ್‌ಐಯನ್ನು ತರಾಟೆಗೆ ತೆಗೆದುಕೊಂಡರು.

ನಾನು ಮ್ಯಾಜಿಸ್ಟ್ರೇಟ್ ಹೇಳಿದ್ದೀನಿ. ಇನ್ಮುಂದೆ ದಂಡ ಹಾಕಬೇಡಿ ಎಂದು ಎಸ್‌ಐಗೆ ತಹಶೀಲ್ದಾರ್ ವಾರ್ನಿಂಗ್ ಮಾಡಿದರು., 'ಇದೇ ಫಸ್ಟ್ ಅಂಡ್​ ಲಾಸ್ಟ್​​ ಎಂದು ಉಪವಿಭಾಗಾಧಿಕಾರಿ ಎಚ್ಚರಿಸಿದರು.

ಕಾನೂನು ಪಾಲನೆ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿಗಳಿಂದಲೇ ತಪ್ಪು ಮಾಡಿದವನ ಪರ ವಕಾಲತ್ತು ವಹಿಸಿಕೊಳ್ಳಲಾಗಿದೆ. ಎಸ್‌ಐಗೆ ತರಾಟೆ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯ ಜನರಿಗೊಂದು ಕಾನೂನು ಕಂದಾಯ ಇಲಾಖೆ ಸಿಬ್ಬಂದಿಗೆ ಮತ್ತೊಂದು ಕಾನೂನು ಇದೆಯಾ? ಎಂದು ಪ್ರಶ್ನಿಸುತ್ತಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.