ಮಂಡ್ಯ: ಮಹಿಳಾ ನೌಕರರ ದೃಷ್ಟಿಯಿಂದ ರೈಲಿನಲ್ಲಿ ಮಹಿಳಾ ಬೋಗಿ ಒದಗಿಸಬೇಕು ಎಂಬ ಮಂಡ್ಯ ಸಂಸದೆ ಸುಮಲತಾ ಮನವಿಯನ್ನು ಕೇಂದ್ರ ರೈಲ್ವೇ ಸಚಿವಾಲಯ ಪುರಸ್ಕರಿಸಿದೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಂಸದರ ಮೊದಲ ಮನವಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಪರಿಣಾಮ ಮೆಮೊ ರೈಲಿನಲ್ಲಿ ಮಹಿಳಾ ಬೋಗಿಗೆ ಚಾಲನೆ ಸಿಗಲಿದೆ.
ಸುಮಲತಾ ಅಂಬರೀಶ್ ನಾಳೆ 11 ಗಂಟೆಗೆ ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಮೆಮೊ ರೈಲಿನ ಮಹಿಳಾ ಬೋಗಿಗಳಿಗೆ ಚಾಲನೆ ನೀಡಲಿದ್ದು ರೈಲ್ವೆ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಇತ್ತೀಚೆಗಷ್ಟೇ ಸಂಸದೆ ಸುಮಲತಾ ಅಂಬರೀಶ್ ಮಹಿಳಾ ನೌಕರರ ದೃಷ್ಟಿಯಿಂದ ರೈಲುಗಳಿಗೆ ಮಹಿಳಾ ಬೋಗಿ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.