ಮಂಡ್ಯ: ಸಾಮಾನ್ಯವಾಗಿ ಹಬ್ಬಗಳಲ್ಲಿ ರಿಯಾಯಿತಿ ನೀಡುವುದನ್ನು ನೋಡಿರುತ್ತೀರಿ. ಆದರೆ ನಗರದ ನೂರಡಿ ರಸ್ತೆಯ ಕರ್ನಾಟಕ ಬಾರ್ ವೃತ್ತದಲ್ಲಿರುವ ಚಿಕನ್ ಶಾಪ್ವೊಂದು ಇದೆ. ಈ ಮಾಂಸ ಮಾರಾಟ ಅಂಗಡಿ ಇಟ್ಟುಕೊಂಡಿರುವ ಯುವಕನು ನಟಿ ಸನ್ನಿ ಲಿಯೋನ್ ಅಭಿಮಾನಿ. ಅವರ ಫಾಲೋವರ್ಸ್ಗೆ ವರ್ಷಪೂರ್ತಿ ವಿಶೇಷ ಆಫರ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಶೇ.10ರಷ್ಟು ಡಿಸ್ಕೌಂಟ್: ಪ್ರಸಾದ್ ಎಂಬಾತ ತನ್ನ ಅಂಗಡಿಯಲ್ಲಿ ಚಿಕನ್ ಖರೀದಿಸುವ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಶೇ.10ರಷ್ಟು ಡಿಸ್ಕೌಂಟ್ ಕೊಡುವುದಾಗಿ ಬೋರ್ಡ್ ಹಾಕಿದ್ದಾರೆ. ಸುಮ್ಮನೆ ಬಂದು ನಾನು ಸನ್ನಿ ಲಿಯೋನ್ ಅಭಿಮಾನಿ ಎಂದರೆ ರಿಯಾಯಿತಿ ಸಿಗುವುದಿಲ್ಲ. ಆ ಅಭಿಮಾನಿ ಕೆಳಗಿನ ಮೂರು ಪ್ರಮುಖ ಷರತ್ತುಗಳನ್ನು ಪಾಲಿಸಿರಬೇಕು.
- ಮೊದಲನೇ ಷರತ್ತು: ಸಾಮಾಜಿಕ ಜಾಲತಾಣ ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್ ಅವರನ್ನು ಫಾಲೋ ಮಾಡುತ್ತಿರಬೇಕು.
- ಎರಡನೇ ಷರತ್ತು: ತಮ್ಮ ಮೊಬೈಲ್‌ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು.
- ಮೂರನೇ ಷರತ್ತು: ಅವರ ಎಲ್ಲ ಚಿತ್ರಗಳಿಗೂ ಆತ ಮೆಚ್ಚುಗೆ ಹಾಗೂ ಕಾಮೆಂಟ್ ಮಾಡಿರಬೇಕು.ಸನ್ನಿ ಲಿಯೋನ್ ಫ್ಯಾನ್ಸ್ಗೆ ಬಂಪರ್ ಆಫರ್ ನೀಡಿದ ಮಂಡ್ಯದ ಗಂಡು
ಬೋರ್ಡ್ ವೈರಲ್: ಈ ಷರತ್ತುಗಳನ್ನು ಅನುಸರಿಸಿದ್ದ ಅಭಿಮಾನಿಗಳಿಗೆ ಈತನ ಚಿಕನ್ ಅಂಗಡಿಯಲ್ಲಿ ಡಿಸ್ಕೌಂಟ್ ಸಿಗುತ್ತಿದೆ. ಸದ್ಯ ಈ ಡಿಸ್ಕೌಂಟ್ ಬೋರ್ಡ್ ವೈರಲ್ ಆಗುತ್ತಿದೆ.
