ಮಂಡ್ಯ: ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಸುಮಲತಾ ಪ್ರಚಾರ ರ‍್ಯಾಲಿ ನಡೆಯಿತು. ಸ್ವಾಭಿಮಾನಿ ಸಮ್ಮಿಲನಕ್ಕೆ ಜನಸಾಗರ ಹರಿದು ಬಂದಿತ್ತು. ರ‍್ಯಾಲಿಗೂ ಮುನ್ನ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಮಾಡಿದರು.
ಸುಮಲತಾ ಸಮಾವೇಶದ ರ್ಯಾಲಿಗೆ ವಿವಿಧ ಪಕ್ಷಗಳ ಧ್ವಜಗಳು ಮೆರಗು ನೀಡಿದವು. ರ್ಯಾಲಿ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ರೈತ ಸಂಘ, ಬಿಜೆಪಿ, ಸ್ವಾಭಿಮಾನಿ, ಪಕ್ಷ, ಡಿಎಸ್‌ಎಸ್ ಹಾಗೂ ಕನ್ನಡ ಸಂಘಟನೆಗಳ ಬಾವುಟಗಳು ರಾರಾಜಿಸಿದವು.
ರೆಬಲ್ ನಾಯಕರಾದ ರಮೇಶ್ ಬಾಬು, ಚಲುವರಾಯಸ್ವಾಮಿ , ಗಣಿಗ ರವಿಕುಮಾರ್ ಭಾವಚಿತ್ರ ಹೊತ್ತು ಅಭಿಮಾನಿಗಳು ಮೆರವಣಿಗೆ ಮಾಡಿದರು. ಸುಮಾರು 1 ಕಿ.ಮೀ ಉದ್ದದ ಜನ ಸಾಗರದ ನಡುವೆ ರೋಡ್ ಶೋ ನಡೆಯಿತು. ನಟರಾದ ಯಶ್, ದರ್ಶನ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ನಾಯಕರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.