ETV Bharat / state

ಟಿಪ್ಪು ಕೋಟೆಗೆ ಮುತ್ತಿಗೆ ಹಾಕಿದ  ಖಾಸಗಿ ವ್ಯಕ್ತಿಗಳು... ಕಂದಕ ಮುಚ್ಚಿ ಕಾಮಗಾರಿಗೆ ಸಿದ್ಧತೆ - demolished by private people

ಕೋಟೆಯ ಮುಖ್ಯ ದ್ವಾರದಲ್ಲೇ ಖಾಸಗಿ ವ್ಯಕ್ತಿಗಳು ಕೋಟೆಯನ್ನು ನೆಲಸಮ ಮಾಡಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ಮಾಡಿದ್ದಾರೆ. ಕೋಟೆಯ ಮುಖ್ಯ ದ್ವಾರದ ಬಲ ಭಾಗದಲ್ಲಿ ಕಂದಕವನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ.

Srirangapatna Fort
ಶ್ರೀರಂಗಪಟ್ಟಣ ಕೋಟೆ
author img

By

Published : Jun 16, 2020, 6:56 PM IST

Updated : Jun 16, 2020, 7:03 PM IST

ಮಂಡ್ಯ: ಮೈಸೂರು ಸಂಸ್ಥಾನದ ಮೊದಲ ರಾಜಧಾನಿ ಶ್ರೀರಂಗಪಟ್ಟಣದ ಕೋಟೆಗೆ ಆಪತ್ತು ಎದುರಾಗಿದೆ. ಕೋಟೆಯ ಇಕ್ಕೆಲಗಳಲ್ಲಿ ಕಾಮಗಾರಿ ಆರಂಭವಾಗಿದ್ದು, ಕೋಟೆಯ ಗೋಡೆ ಶಿಥಿಲಗೊಂಡಿದೆ.

ಶ್ರೀರಂಗಪಟ್ಟಣ ಕೋಟೆಗೆ ಆಪತ್ತು

ಕೋಟೆಯ ಮುಖ್ಯ ದ್ವಾರದಲ್ಲೇ ಖಾಸಗಿ ವ್ಯಕ್ತಿಗಳು ಕೋಟೆಯನ್ನು ನೆಲಸಮ ಮಾಡಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ಮಾಡಿದ್ದಾರೆ. ಕೋಟೆಯ ಮುಖ್ಯ ದ್ವಾರದ ಬಲ ಭಾಗದಲ್ಲಿ ಕಂದಕವನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ. ಜೊತೆಗೆ ಕೋಟೆಯ ಗುಡ್ಡವನ್ನು ಕರಗಿಸಿ ಕಾಮಗಾರಿ ನಡೆಸಲು ಖಾಸಗಿ ವ್ಯಕ್ತಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸಮತಟ್ಟು ಮಾಡಿರುವ ಜಮೀನು ಖಾಸಗಿ ವ್ಯಕ್ತಿಯದ್ದು ಎಂದು ಹೇಳಲಾಗುತ್ತಿದ್ದು, ಕಾನೂನು ಮೀರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಶ್ರೀರಂಗಪಟ್ಟಣದ ಯಾವುದೇ ಭಾಗದಲ್ಲೂ ಕಾಮಗಾರಿ ನಡೆಸಲು ಅನುಮತಿ ಕಡ್ಡಾಯ. ಆದರೆ ಕೋಟೆಯ ಗುಡ್ಡವನ್ನು ಸಮತಟ್ಟು ಮಾಡಿದರೂ ಅಧಿಕಾರಿಗಳು ಕೇಳುತ್ತಿಲ್ಲವಂತೆ. ಖಾಸಗಿ ಲಾಬಿಗೆ ಮಣಿದು ಕಾಮಗಾರಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇದಕ್ಕೆ ರಾಜ್ಯ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.

Last Updated : Jun 16, 2020, 7:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.