ETV Bharat / state

ಮಂಡ್ಯದಲ್ಲಿ ಮತ್ತಷ್ಟು ಹನಿಟ್ರ್ಯಾಪ್​ ನಡೆದಿರುವ ಶಂಕೆ ಇದೆ: ಎಸ್ಪಿ - Etv Bharat Kannada

ಚಿನ್ನದ ವ್ಯಾಪಾರಿ ಹನಿಟ್ರ್ಯಾಪ್​ ಪ್ರಕರಣದ ಆರೋಪಿಗಳಿಂದ ಮತ್ತಷ್ಟು ಹನಿಟ್ರ್ಯಾಪ್​ ಕೃತ್ಯಗಳು ನಡೆದಿರುವ ಸಾಧ್ಯತೆ ಇದೆ ಎಂದು ಎಸ್ಪಿ ತಿಳಿಸಿದ್ದಾರೆ.​​

Mnd_23_01_ any trap
ಹನಿಟ್ರ್ಯಾಪ್​ ಪ್ರಕರಣ
author img

By

Published : Aug 23, 2022, 4:42 PM IST

ಮಂಡ್ಯ: ಚಿನ್ನದ ವ್ಯಾಪಾರಿ ಹನಿಟ್ರ್ಯಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಇನ್ನಷ್ಟು ಹನಿಟ್ರ್ಯಾಪ್​ ನಡೆದಿರುವ ಶಂಕೆ ಇದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಎನ್​.ಯತೀಶ್​ ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನದ ವ್ಯಾಪಾರಿ ಹನಿಟ್ರ್ಯಾಪ್​ ಪ್ರಕರಣದ ಆರೋಪಿ ಸಲ್ಮಾಭಾನು ಮತ್ತು ಗ್ಯಾಂಗ್​ನಿಂದ ಮತಷ್ಟು ಕೃತ್ಯ ನಡೆದಿರುವ ಬಗ್ಗೆ ಶಂಕಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದರು.

ಹನಿಟ್ರ್ಯಾಪ್​ ನಡೆದಿರುವ ಬಗ್ಗೆ ಠಾಣೆಗೆ ಕರೆಗಳು ಬರುತ್ತಿವೆ. ಆದರೇ ಯಾರು ದೂರು ನೀಡಿಲ್ಲ. ಪ್ರಕರಣದ ಹಿಂದೆ ಹಲವರ ಕೈವಾಡ ಇರುವ ಬಗ್ಗೆ ಅನುಮಾನವೂ ವ್ಯಕ್ತವಾಗಿದ್ದು, ಇನ್ನಷ್ಟು ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಹೇಳಿದರು.

ಪೊಲೀಸ್​ ವರಿಷ್ಠಾಧಿಕಾರಿ

ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಪೊಲೀಸ್ ಇಲಾಖೆಗೆ ಎಚ್ಚರಿಕೆ ವಹಿಸಲಾಗಿದೆ ಎಂದು ಯತೀಶ್​ ತಿಳಿಸಿದರು.

ಇದನ್ನೂ ಓದಿ: ಹನಿಟ್ರ್ಯಾಪ್ ಸುಳಿಗೆ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ: ಆರು ತಿಂಗಳ ಬಳಿಕ ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.