ETV Bharat / state

ಷಡ್ಯಂತ್ರದಿಂದ ನನ್ನ ಸರ್ಕಾರವನ್ನು ಬೀಳಿಸಲಾಯಿತು: ಕುಮಾರಸ್ವಾಮಿ

author img

By

Published : Jan 10, 2021, 9:46 PM IST

ಸಕ್ಕರೆ ಕಾರ್ಖಾನೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅದನ್ನು ಉಳಿಸಿಕೊಡೋದು ನನ್ನ ಜವಾಬ್ದಾರಿ ಎಂದು ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

dcs
ಹೆಚ್‌.ಡಿ ಕುಮಾರಸ್ವಾಮಿ ಬೇಸರ

ಮಂಡ್ಯ: ನಮ್ಮ ಪಕ್ಷಕ್ಕೆ ಬಹುಮತ ಬರದೆ ಇದ್ದರೂ ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೆ. ಆಗ ಈ ಜಿಲ್ಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಹೆಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಕೊತ್ತತ್ತಿ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಬಿಡುಗಡೆ ಮಾಡಿದ ಹಣವನ್ನು ಬಿಜೆಪಿಯವರು ಬೇರೆಡೆಗೆ ವರ್ಗಾಯಿಸಿದ್ದರಿಂದ ಈ ಜಿಲ್ಲೆ ಅಭಿವೃದ್ಧಿ ಹೊಂದಿಲ್ಲ. ಮುಂದಿನ ದಿನಗಳಲ್ಲಿ ನಾನು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿ ಈ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಇನ್ನೊಂದು ವರ್ಷ ನಾನು ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರೆ ಹೊಸ ಶುಗರ್ ಫ್ಯಾಕ್ಟರಿ ಮಾಡುತ್ತಿದ್ದೆ ಎಂದರು.

ಓದಿ:ಆತ್ಮ ನಿರ್ಭರ ನನ್ನ ಯೋಜನೆಯ ಕಾಪಿ: ಕುಮಾರಸ್ವಾಮಿ

ನಾನು ಕೊಟ್ಟ ಕಾರ್ಯಕ್ರಮಕ್ಕೆ ನಿನ್ನೆ ಮುಖ್ಯಮಂತ್ರಿ ಕೊಪ್ಪಳದಲ್ಲಿ ಚಾಲನೆ ನೀಡಿದ್ದಾರೆ. ಈ ಮುಖ್ಯಮಂತ್ರಿಗಳಿಗೆ ಕನಿಷ್ಠ ಕೃತಜ್ಞತೆ ಸಲ್ಲಿಸುವ ಮನಸ್ಸಿಲ್ಲ. ನನ್ನ ದುರದೃಷ್ಟ, ನನ್ನ ಸರ್ಕಾರ ತೆಗೆಯಬೇಕು ಎಂದು ಹಲವು ಷಡ್ಯಂತ್ರ ನಡೆಯಿತು. ಹೀಗಾಗಿ ನಾನು ಸಿಎಂ ಪದವಿಯಿಂದ ಕೆಳಗಿಳಿಯಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.