ಮಂಡ್ಯ: ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ನಂತರ ಸಂಸದೆ ಶೋಭಾ ಕರಂದ್ಲಾಜೆ ಅವರು ಮದ್ದೂರು ಪಟ್ಟಣದಲ್ಲಿರುವ ಮದ್ದೂರಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮದ್ದೂರು ಪಟ್ಟಣದಲ್ಲಿ ನೆಲೆಸಿರುವ ಶಕ್ತಿ ದೇವತೆ ಮದ್ದೂರಮ್ಮ ದರ್ಶನ ಪಡೆದ ಸಂಸದೆ ಶೋಭಾ ಕರಂದ್ಲಾಜೆ ದೇವಿಯ ದರ್ಶನದ ಬಳಿಕ ಪ್ರಾರ್ಥನೆ ಸಲ್ಲಿಸಿದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ದೇವಿಗೆ ಬೇಡಿಕೊಂಡರು. ಬಳಿಕ ಅಲ್ಲಿಂದ ಬೆಂಗಳೂರು ಕಡೆ ತೆರಳಿದರು.