ಮಂಡ್ಯ: ಟಿಕೆಟ್ ತಕೊಂಡು ನೋಡಿದ್ದಿನಿ, ಟಿಕೆಟ್ ಇಲ್ಲದೆಯೂ ನೋಡಿದ್ದೀನಿ. ಈ ಸಾರಿ ನಾಗಮಂಗಲದಲ್ಲಿ ನಂದೇ ಆಟ, ಶಾಸಕ ಸ್ಥಾನಕ್ಕೆ ಮುಂದಿನ ಅಭ್ಯರ್ಥಿ ನಾನೇ ಎಂದು ಮಂಡ್ಯದಲ್ಲಿ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಿದ್ಧತೆ ಆರಂಭ ಮಾಡಿದ್ದೇವೆ. ನಾವು ಎಷ್ಟೇ ಹಳಬರು ಇದ್ದರೂ ಜನ ಸಂಪರ್ಕದಲ್ಲೇ ಇರಬೇಕು. ಜೆಡಿಎಸ್ನಲ್ಲಿದ್ದೇನೆ, ಜೆಡಿಎಸ್ನಿಂದಲೇ ಶಾಸಕ ಸ್ಥಾನಕ್ಕೆ ಮುಂದಿನ ಅಭ್ಯರ್ಥಿ ನಾನೇ ಎಂದರು.
ಸುರೇಶ್‌ಗೌಡರನ್ನು ಲೋಕಸಭೆಗೆ ಕಳಿಸೋಣಾ, ಅವರು ತುಂಬಾ ಚೆನ್ನಾಗಿ ಇಂಗ್ಲಿಷ್-ಹಿಂದಿ ಮಾತನಾಡುತ್ತಾರೆ. ಸುರೇಶ್ ಗೌಡರು ಒಪ್ಪದಿದ್ರೇ ಜನರೇನು ದಡ್ಡರಾ, ನಮ್ಮ ನಾಯಕರು ದಡ್ಡರಾ ಎಂದರು.
ನಾಗಮಂಗಲದಲ್ಲಿ ನಾನು 9 ಚುನಾವಣೆ ಎದುರಿಸಿದ್ದೇನೆ. 5 ಚುನಾವಣೆ ಸೋತಿದ್ದೇನೆ, 4 ಗೆದ್ದಿದ್ದೇನೆ. ಅದರಿಂದ ಜನರ ಜೊತೆ ಇರಬೇಕು, ಜನರ ಜೊತೆ ಕೆಲಸ ಮಾಡಬೇಕು ಎಂದರು. ನಾಗಮಂಗಲದಲ್ಲಿ ಚುನಾವಣೆಗೆ ನಿಂತಾಗ, ಅಪ್ಪಾಜಿಗೌಡ, ಸುರೇಶ್‌ಗೌಡ ಎಲ್ಲರೂ ಹೋರಾಟ ಮಾಡಿದ್ದೇವೆ ಎಂದರು.
ಇದನ್ನು ಓದಿ: ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಕೋಟ್ಯಧೀಶನಾದ ಮಂಡ್ಯದ ಯುವಕ