ಮಂಡ್ಯ: ಉಪ ಚುನಾವಣಾ ಕಣಕ್ಕೆ ಸ್ಯಾಂಡಲ್ವುಡ್ ತಾರೆಯರ ಎಂಟ್ರಿಯಾಗಿದ್ದು, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ತುಪ್ಪದ ಬೆಡಗಿ ರಾಗಿಣಿ ನೇತೃತ್ವದಲ್ಲಿ ಪ್ರಚಾರ ಮಾಡಿದ್ದಾರೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ನಟಿಯರಾದ ರಾಗಿಣಿ ದ್ವಿವೇದಿ, ಆಶಿಕಾ ರಂಗನಾಥ್, ಪಾರು ಧಾರಾವಾಹಿ ನಟಿ ಪಾರು, ಕಮಲಿ ಧಾರಾವಾಹಿಯ ನಾಯಕಿ ಕಮಲಿ, ಡಿಂಗ್ರಿ ನಾಗರಾಜು, ಮೂಗು ಸುರೇಶ್ ಇಂದು ಬಂಡಿಹೊಳೆ, ಕುಪ್ಪಹಳ್ಳಿ, ಮಾಕವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರಲ್ಲಿ ಬಿಜೆಪಿ ಪರ ಮತಯಾಚಿಸಿದರು. ನಟಿಯರನ್ನು ನೋಡಲು ಗ್ರಾಮಸ್ಥರು ಅದರಲ್ಲಿಯೂ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡಿದ್ದರು.
ರಾಗಿಣಿ ದ್ವಿವೇದಿ ಪ್ರಚಾರದುದ್ದಕ್ಕೂ ಮಹಿಳೆಯರನ್ನು ಸೆಳೆಯುತ್ತಿದ್ದ ದೃಶ್ಯ ಕಂಡು ಬಂದಿತು. ಮಕ್ಕಳನ್ನು ಮುದ್ದಾಡಿ ಗಮನ ಸೆಳೆದರೆ, ನಟಿಯರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಯುವಜನರು ಮುಗಿಬೀಳುತ್ತಿದ್ದರು.