ETV Bharat / state

ಮಂಡ್ಯ: ರಸ್ತೆ ಗುಂಡಿಗೆ ಬಿದ್ದು ನಿವೃತ್ತ ಯೋಧ ಬಲಿ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಹಲವಾರು ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದ್ರೆ ಈಗ ಮಂಡ್ಯದಲ್ಲಿ ರಸ್ತೆ ಗುಂಡಿಗೆ ನಿವೃತ್ತ ಯೋಧರೊಬ್ಬರು ಬಲಿ ಪಡೆದಿದೆ.

Retired soldier killed in Mandya road pothole  Mandya road pothole  Bengaluru road pothole issue  ರಸ್ತೆಯ ಗುಂಡಿಗೆ ನಿವೃತ್ತ ಯೋಧ ಬಲಿ  ಬೆಂಗಳೂರಿನಲ್ಲಿ ರಸ್ತೆ ಗುಂಡಿ  ಗುಂಡಿಗೆ ನಿವೃತ್ತ ಯೋಧ ಬಲಿ  ನಿವೃತ್ತರಾಗಿದ್ದ ಯೋಧ ಸಾತನೂರು ಗ್ರಾಮದ ಎಸ್​ಎನ್ ಕುಮಾರ್
ಮಂಡ್ಯದ ರಸ್ತೆಯ ಗುಂಡಿಗೆ ನಿವೃತ್ತ ಯೋಧ ಬಲಿ
author img

By

Published : Nov 14, 2022, 11:17 AM IST

ಮಂಡ್ಯ: ನಗರದ ಆನೆಕೆರೆ ಬೀದಿಯ ಕಾರಿಮನೆ ಗೇಟ್ ಬಳಿ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗೆ ಬಿದ್ದು ನಿವೃತ್ತ ಯೋಧ ಬಲಿಯಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಸಾತನೂರು ಗ್ರಾಮದ ಎಸ್​ಎನ್ ಕುಮಾರ್ (39) ಸಾವಿಗೀಡಾದವರು.

ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಎಸ್​ಎನ್ ಕುಮಾರ್ ತನ್ನ ತಂದೆಯ ಜೊತೆ ಬೈಕ್‌ನಲ್ಲಿ ಮಂಡ್ಯದ ಕಾರೆಮನೆ ಗೇಟ್ ಮೂಲಕ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ದೊಡ್ಡ ಗುಂಡಿ ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಕುಮಾರ್ ತಲೆ ಮೇಲೆ ಲಾರಿ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕುಮಾರ್ ಅವರ ತಂದೆಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ ಆಗಿ ಆಯ್ಕೆಯಾಗಿ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದರು.

ಇದನ್ನೂ ಓದಿ: ಬೆಂಗಳೂರು: ಬಿದ್ದ ರಸ್ತೆ ಗುಂಡಿಯಲ್ಲೇ ಅರ್ಧ ದಿನ ಕುಳಿತು ಸವಾರ ಪ್ರತಿಭಟನೆ.. ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.