ETV Bharat / state

ಸೋಂಕಿತನಿಗೆ ರೆಮ್​ಡಿಸಿವಿರ್ ಇಂಜೆಕ್ಷನ್ ಕೊಟ್ಟಿದ್ದೇನೆಂದ ವೈದ್ಯ - ಇಲ್ಲ ಎಂದ ಸಂಬಂಧಿಕ: ಆಸ್ಪತ್ರೆಯಲ್ಲಿ ರಂಪಾಟ

author img

By

Published : May 9, 2021, 7:38 PM IST

ಸೋಂಕಿತನಿಗೆ 3 ದಿನಗಳಿಂದ ಇಂಜೆಕ್ಷನ್ ಹಾಕಿರುವುದಾಗಿ ರಿಜಿಸ್ಟರ್​​ನಲ್ಲಿ ನಾಗಮಂಗಲ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಎಂಟ್ರಿ ಮಾಡಿದ್ದಾರೆ. ಆದ್ರೆ 3 ದಿನಗಳಿಂದ ಯಾವುದೇ ಇಂಜೆಕ್ಷನ್ ಕೊಟ್ಟಿಲ್ಲವೆಂದು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ತ್ಯಾಗರಾಜ್ ವಿರುದ್ಧ ಸೋಂಕಿತರ ಸಂಬಂಧಿವೋರ್ವರು ಗಂಭೀರ ಆರೋಪ ಮಾಡಿದ್ದಾರೆ.

Remedicivir injection issue of mandya hospital
ರೆಮಿಡಿಸಿವಿರ್ ಇಂಜೆಕ್ಷನ್ ವಿಷಯವಾಗಿ ಆಸ್ಪತ್ರೆಯಲ್ಲಿ ರಂಪಾಟ

ಮಂಡ್ಯ: ಜಿಲ್ಲೆಯಲ್ಲೂ ರೆಮ್​ಡಿಸಿವಿರ್ ಚುಚ್ಚುಮದ್ದು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೇ ಅಕ್ರಮ ದಂಧೆಯ ಹಾಟ್ ಸ್ಪಾಟ್ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ರೋಗಿಗಳಿಗೆ ಹಾಕುವ ರೆಮ್​ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಸೋಂಕಿತನ ಕುಟುಂಬ ಸದಸ್ಯನಿಂದ ವೈದ್ಯರ ರೆಮ್​ಡಿಸಿವಿರ್ ಇಂಜೆಕ್ಷನ್ ದಂಧೆ ಬಯಲಾಗಿದೆ ಎನ್ನಲಾಗ್ತಿದೆ.

ರೆಮ್​ಡಿಸಿವಿರ್ ಇಂಜೆಕ್ಷನ್ ವಿಷಯವಾಗಿ ಆಸ್ಪತ್ರೆಯಲ್ಲಿ ರಂಪಾಟ

ಸೋಂಕಿತನಿಗೆ 3 ದಿನಗಳಿಂದ ಇಂಜೆಕ್ಷನ್ ಹಾಕಿರುವುದಾಗಿ ರಿಜಿಸ್ಟರ್​​ನಲ್ಲಿ ಆಸ್ಪತ್ರೆ ಸಿಬ್ಬಂದಿ ಎಂಟ್ರಿ ಮಾಡಿದ್ದಾರೆ. ಆದ್ರೆ 3 ದಿನಗಳಿಂದ ಯಾವುದೇ ಇಂಜೆಕ್ಷನ್ ಕೊಟ್ಟಿಲ್ಲವೆಂದು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ತ್ಯಾಗರಾಜ್ ವಿರುದ್ಧ ಸೋಂಕಿತರ ಸಂಬಂಧಿವೋರ್ವ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು ಸೋಂಕಿತ ವ್ಯಕ್ತಿಯ ಸಂಬಂಧಿಕ ಪ್ರಶ್ನಿಸಿದಕ್ಕೆ ವೈದ್ಯ ಆಕ್ರೋಶಗೊಂಡಿದ್ದಾನೆ. ಈ ವಿಚಾರವಾಗಿ ಆಸ್ಪತ್ರೆಯಲ್ಲಿ ಸೋಂಕಿತನ ಸಂಬಂಧಿಕ ರಂಪಾಟ ಮಾಡಿದ್ದಾನೆ. ಈ ವೇಳೆ ಆತನಿಗೆ ಇಂಜೆಕ್ಷನ್ ಕೊಟ್ಟಿದ್ದೇನೆಂದು ಹೇಳಿದ್ದ ವೈದ್ಯ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಸೋಂಕಿತ ವ್ಯಕ್ತಿ ವೈದ್ಯರ ಮುಂದೆಯೇ ಇಂಜೆಕ್ಷನ್ ಕೊಟ್ಟಿಲ್ಲವೆಂದು ಹೇಳಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಆಗಮಿಸಿದ್ದಾರೆ.

ಪೊಲೀಸರು ಬಂದ ನಂತರ ಸೋಂಕಿತನಿಗೆ ವೈದ್ಯ ರೆಮ್​ಡಿಸಿವಿರ್ ಇಂಜೆಕ್ಷನ್ ಕೊಟ್ಟಿದ್ದಾನೆ. ಆದ್ರೆ ವೈದ್ಯ ಇಂಜೆಕ್ಷನ್ ಕೊಟ್ಟಿದ್ದು ನಿಜವಾದರೆ, ಮತ್ತೊಮ್ಮೆ ಪೊಲೀಸ್ ಸಮ್ಮುಖದಲ್ಲಿ ಇಂಜೆಕ್ಷನ್ ಕೊಟ್ಟಿದ್ದು ಯಾಕೆ? ಎಂದು ಸಂಬಂಧಿಕ ಪ್ರಶ್ನಿಸಿದ್ದಾನೆ. ಅಲ್ಲದೇ ವೈದ್ಯನ ಈ ನಡೆ ಅವರ ಅಕ್ರಮವನ್ನು ತೋರ್ಪಡಿಸಿದೆ ಎಂದು ಸಂಬಂಧಿಕ ಹೇಳಿದ್ದಾರೆ.

ರೋಗಿಗಳಿಗೆ ಇಂಜೆಕ್ಷನ್ ಹಾಕಿರುವುದಾಗಿ ನೋಂದಣಿ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರಾ ವೈದ್ಯರು? ಎಂಬ ಪ್ರಶ್ನೆ ಮೂಡಿದ್ದು, ಸಾಯೋ ಉದ್ದೇಶದಿಂದ ಈ ಆಸ್ಪತ್ರೆಗೆ ಸೇರಿಸಬೇಕಾ? ಎಂದು ಮಾಧ್ಯಮಗಳ‌ ಮುಂದೆ ಸೋಂಕಿತನ ಸಂಬಂಧಿಕ ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ: ಅಂದು ದೇಗುಲ-ಇಂದು ಆಸ್ಪತ್ರೆ.. ಕೊರೊನಾ ವಾರಿಯರ್​ಗಳಾದ್ರು ಮಲೆಮಹದೇಶ್ವರ ಬೆಟ್ಟದ 100 ಸಿಬ್ಬಂದಿ

ವಿಷಯ ಎಲ್ಲರಿಗೂ ತಿಳಿಯುತ್ತಿದ್ದಂತೆ ಆಸ್ಪತ್ರೆಯಿಂದ ವೈದ್ಯ ಕಾಲ್ಕಿತ್ತಿದ್ದು, ವೈದ್ಯನ ರೆಮ್​ಡಿಸಿವಿರ್ ದಂಧೆ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ವೈದ್ಯನ ಅಸಲಿಯತ್ತು ಬೆಳಕಿಗೆ ಬರಲಿ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರೆ ರೋಗಿಗಳಿಗೆ ಅನ್ಯಾಯವಾಗದಿರಲಿ ಎಂದು ಸೋಂಕಿತನ ಸಂಬಂಧಿಕ ಕಣ್ಣೀರಿಟ್ಟಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.