ಮಂಡ್ಯ: ಯಾವುದೇ ರೋಗವಾದರೂ ಅದರ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು ಎಂಬುವುದು ಸಾಮಾನ್ಯ ಮಾತು. ಆದರೆ, ಕೋವಿಡ್ ಸೋಂಕು ಹಾಗಲ್ಲ. ಇದರಲ್ಲಿ ಸೋಂಕಿತರ ಜೊತೆ ಇತರರು ಕೂಡಾ ಸಂಕಟ ಪಡಬೇಕಾಗುತ್ತದೆ.
ಅದರಲ್ಲೂ, ಸೋಂಕು ತಗುಲಿದ ಕಾರಣಕ್ಕೆ ಪುಟ್ಟ ಮಗುವಿನಿಂದ ದೂರವಾಗುವ ತಾಯಿ, ಗಂಡ-ಹೆಂಡತಿ ಪರಸ್ಪರ ಭೇಟಿಯಾಗದಂತಹ ಪರಿಸ್ಥಿತಿ ನಿಜಕ್ಕೂ ಅರಗಿಸಿಕೊಳ್ಳಲಾಗದ್ದು. ಮಂಡ್ಯದಲ್ಲೂ ಹೀಗೆ ಕೋವಿಡ್ ತಗುಲಿದ ಒಂದೇ ಕುಟುಂಬದ ಆರು ಮಂದಿ ತಮ್ಮವರಿಂದ ದೂರವಾಗಿದ್ದಾರೆ.
ಇದನ್ನೂ ಓದಿ : 'ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮೈಸೂರಿನಲ್ಲಿ ಬೆಂಗಳೂರಿನ ಪರಿಸ್ಥಿತಿ ಉದ್ಭವ'
ಕೆ.ಆರ್.ಪೇಟೆ ತಾಲೂಕಿನ ಒಂದೇ ಕುಟುಂಬದ 6 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಹೀಗಾಗಿ, ಕುಟುಂಬದ ಇತರ ಸದಸ್ಯರು ಅವರನ್ನು ದೂರದಿಂದಲೇ ನೋಡಿ ಕಣ್ಣೀರು ಹಾಕುತ್ತಿದ್ದರು. ಸೋಂಕಿತರಿಗೆ ಮಂಡ್ಯದ ಒಕ್ಕಲಿಗರ ಭವನದ ಕೋವಿಡ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಅಲ್ಲಿಗೆ ಆಗಮಿಸಿದ ಕುಟುಂಬಸ್ಥರು ದೂರದಿಂದಲೇ ತಮ್ಮ ಮನೆಯವರನ್ನು ನೋಡಿ ಕಣ್ಣೀರಾದರು.